ರಾಷ್ಟ್ರೀಯ

ಪಾಕ್ ISI ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದವನ ಬಂಧನ

Pinterest LinkedIn Tumblr


ಅಹಮದಾಬಾದ್‌ (ಆಗಸ್ಟ್‌ 31); ಪಾಕಿಸ್ತಾನದ ಗೂಢಾಚಾರ ಸಂಸ್ಥೆ (ಐಎಸ್ಐ)ಗೆ ಭಾರತದಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಗುಜರಾತ್‌ನ ಮುಂದ್ರಾ ಡಾರ್ಕ್‌‌ಯಾರ್ಡ್‌‌ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇಂದು ಬಂಧಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ನ್ಯೂಸ್18ಗೆ ಮಾಹಿತಿ ನೀಡಿದ್ದಾರೆ. ಇದಲ್ಲದೆ ಭಾನುವಾರವೂ ಸಹ ಇಲ್ಲಿನ ವೆಸ್ಟ್‌ಕಚ್‌ ನಿವಾಸಿಯಾದ ರಜಾಕ್ ಭಾಯ್ ಕುಂದರ್ ಎಂಬ ಮತ್ತೋರ್ವ ವ್ಯಕ್ತಿಯನ್ನು ಐಎಸ್ಐ ಏಜೆಂಟ್ ಎಂದು ಬಂಧಿಸಲಾಗಿದ್ದು, ಉತ್ತರಪ್ರದೇಶದಲ್ಲಿ ವರದಿಯಾದ ರಕ್ಷಣಾ/ಐಎಸ್ಐ ಪ್ರಕರಣಕ್ಕೂ ಈತನಿಗೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಏಜೆಂಟ್ ಆಗಿ ಇವರು ಕೆಲಸ ಮಾಡುತ್ತಿರುವುದರ ಬಗ್ಗೆ ನಿಖರ ಮಾಹಿತಿ ಸಿಕ್ಕ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಇವರನ್ನು ಬಂಧಿಸಿದೆ ಎಂದು ವರದಿ ಮಾಡಲಾಗಿದೆ.

ಚಂಡೋಲಿ ಜಿಲ್ಲೆಯ ಮೊಘಲ್ಸ್ ರಾಯ್‌ನ ಮೊಹಮ್ಮದ್ ರಶೀದ್ ಎಂಬ ವ್ಯಕ್ತಿಯ ಬಂಧನಕ್ಕೆ ಸಂಬಂಧಿಸಿದಂತೆ ಲಖನೌದ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಜನವರಿ 19 ರಂದು ದಾಖಲಾದ ಎಫ್ಐಆರ್‌ಗೆ ಈ ಪ್ರಕರಣ ಸಂಬಂಧಿಸಿದೆ ಎಂದು ಎನ್ಐಎ ತಿಳಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಎನ್ಐಎ ಮತ್ತೆ ಪ್ರಕರಣ ದಾಖಲಿಸಿತ್ತು. ತನಿಖೆಯಲ್ಲಿ ರಶೀದ್ ಪಾಕಿಸ್ತಾನದ ರಕ್ಷಣಾ/ಐಎಸ್ಐ ಹ್ಯಾಂಡ್ಲರ್ ಗಳೊಂದಿಗೆ ಸಂಪರ್ಕದಲ್ಲಿದ್ದ ಮತ್ತು ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಎಂದು ತಿಳಿದುಬಂದಿದೆ.

ಭಾರತದಲ್ಲಿ ಕೆಲವು ಸೂಕ್ಷ್ಮ ಮತ್ತು ಕಾರ್ಯತಂತ್ರದ ಮಹತ್ವದ ಸ್ಥಾಪನೆಗಳ ಛಾಯಾಚಿತ್ರಗಳನ್ನು ರವಾನಿಸಿ, ಪಾಕಿಸ್ತಾನದ ಐಎಸ್ಐ ಹ್ಯಾಂಡ್ಲರ್ ಗಳೊಂದಿಗೆ ಸಶಸ್ತ್ರ ಪಡೆಗಳ ಚಲನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು ಎಂದು ಎನ್ಐಎ ತಿಳಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕುಂಭಾರ್ ಅವರ ಮನೆಯಲ್ಲಿ ಶೋಧ ನಡೆಸಿದ್ದು, ಅವರು 5,000 ರೂಗಳನ್ನು ಪೇಟಿಎಂ ಮೂಲಕ ರಿಜ್ವಾನ್ ಎನ್ನುವವನ ಖಾತೆಗೆ ವರ್ಗಾಯಿಸಿರುವುದು ಪತ್ತೆಯಾಗಿದೆ. ಇದನ್ನು ಮೊಹಮ್ಮದ್ ರಶೀದ್ ಹಸ್ತಾಂತರಿಸಲಾಯಿತು ಎಂದು ತಿಳಿದುಬಂದಿದೆ.

ಐಎಸ್ಐ ಏಜೆಂಟರ ನಿರ್ದೇಶನದ ಮೇರೆಗೆ ಈ ಮೊತ್ತವನ್ನು ಕುಂಭರ್ ರಶೀದ್ಗೆ ರವಾನಿಸಿದ್ದಾನೆ. ಕುಂಭಾರ್ ಮನೆಯ ಶೋಧದ ಸಮಯದಲ್ಲಿ, ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

Comments are closed.