ರಾಷ್ಟ್ರೀಯ

1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿ ಲಡಾಖಿನಲ್ಲಿದೆ: ಜೈಶಂಕರ್

Pinterest LinkedIn Tumblr

ನವದೆಹಲಿ: ಪೂರ್ವ ಲಡಾಕ್ ಸ್ಥಿತಿಗತಿಗಳ ಬಗ್ಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ 1962ರ ನಂತರ ಇದು ಅತ್ಯಂತ ಗಂಭೀರ ಪರಿಸ್ಥಿತಿ ಎಂದು ಹೇಳಿದ್ದಾರೆ.

ಇದು ಖಂಡಿತವಾಗಿಯೂ 1962 ರ ನಂತರದ ಅತ್ಯಂತ ಗಂಭೀರ ಪರಿಸ್ಥಿತಿಯಾಗಿದೆ. ವಾಸ್ತವವಾಗಿ, 45 ವರ್ಷಗಳ ನಂತರ, ಈ ಗಡಿಯಲ್ಲಿ ನಾವು ಸಾವು ನೋವುಗಳನ್ನು ಹೊಂದಿದ್ದೇವೆ. ಎಲ್‌ಎಸಿಯಲ್ಲಿ ಪ್ರಸ್ತುತ ಎರಡೂ ಕಡೆಯವರು ನಿಯೋಜಿಸಿರುವ ಪಡೆಗಳ ಪ್ರಮಾಣವೂ ಅಭೂತಪೂರ್ವವಾಗಿದೆ ಜೈಶಂಕರ್ ತಿಳಿಸಿದ್ದಾರೆ.

ಬಿಕ್ಕಟ್ಟು ಶಮನಕ್ಕೆ ಸೇನಾ ಆಯ್ಕೆಗಳು ನಮ್ಮ ಮುಂದಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್ ಹೇಳಿಕೆ ನೀಡಿದ ಬೆನ್ನಲ್ಲೆ ಎಲ್‌ಎಸಿ ಗಡಿಯಲ್ಲಿ ಚೀನಾದೊಂದಿಗಿನ ಬಿಕ್ಕಟ್ಟನ್ನು ರಾಜತಾಂತ್ರಿಕತೆ ಮೂಲಕ ಪರಿಹಾರ ಮಾಡುವ ಬಗ್ಗೆ ವಿದೇಶಾಂಗ ಸಚಿವ ಆರ್. ಜೈಶಂಕರ್‌ ಪ್ರಸ್ತಾಪಿಸಿದ್ದಾರೆ.

ಯಥಾಸ್ಥಿತಿಯನ್ನು ಪುನಃಸ್ಥಾಪಿಸುವಾಗ, ಚೀನಾ ಎಲ್ಲಾ ಒಪ್ಪಂದಗಳನ್ನು ಗೌರವಿಸಲು ಒಪ್ಪಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಪ್ರಯತ್ನಿಸಬಾರದು ಎಂದು ಕೂಡ ತಿಳಿಸಿದರು.

ಎಲ್‌ಎಸಿಯಲ್ಲಿ ಪ್ರಸ್ತುತ ಪರಿಸ್ಥಿತಿಯ ಗಂಭೀರತೆ ಬಗ್ಗೆ ನಮಗೆ ಅರಿವಿದೆ. ಸ್ವಾಭಾವಿಕವಾಗಿ, ನಮ್ಮ ಗಡಿಗಳನ್ನು ಭದ್ರಪಡಿಸಿಕೊಳ್ಳಲು ನಾವು ಏನು ಮಾಡಬೇಕು ಮಾಡುತ್ತಿದ್ದೇವೆ. ನಮ್ಮ ಮಿಲಿಟರಿ ಮಾತುಕತೆಯ ಜೊತೆಗೆ ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಿಯರೊಂದಿಗೆ ಮಾತುಕತೆ ನಡೆಯುತ್ತಿದೆ. ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್, ಎಲ್‌ಎಸಿ ಬಿಕ್ಕಟ್ಟು ಪರಿಹಾರಕ್ಕೆ ನಮ್ಮ ಮುಂದೆ ಮಿಲಿಟರಿ ಆಯ್ಕೆ ಮುಕ್ತವಾಗಿದೆ ಎಂದು ಹೇಳಿದ್ದರು. ಅದಾಗ್ಯೂ ಮಿಲಿಟರಿ ಹಾಗೂ ರಾಜತಾಂತ್ರಿಕತೆ ಮಾತುಕತೆ ವಿಫಲವಾದರೆ ಮಾತ್ರ ಎಂದಿದ್ದರು. ಇದೀಗ ಮತ್ತೆ ಜೈಶಂಕರ್‌ ಸಂಘರ್ಷದ ಹಾದಿ ಹಿಡಿಯುವುದು ಬೇಡ ಎನ್ನುವ ವಿಚಾರವನ್ನ ಮನಗಂಡು ಈ ರೀತಿಯ ಹೇಳಿಕೆ ನೀಡಿರುವ ಸಾಧ್ಯತೆ ಇದೆ.

Comments are closed.