ಮನೋರಂಜನೆ

ಎಸ್​ ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಚಿಂತಾಜನಕ!

Pinterest LinkedIn Tumblr


ಬಹುಭಾಷಾ ಗಾಯಕ, ಗಾನಗಂಧರ್ವ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತಷ್ಟು ಚಿಂತಾಜನಕವಾಗಿದೆ.

ಕೊರೋನಾ ಸೋಂಕಿನಿಂದ ಬಳಲುತ್ತಿರುವ ಎಸ್​ಪಿಬಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಸ್​ಪಿಬಿ ರವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಾರದ ಕಾರಣ. ವೆಂಟಿಲೇಟರ್​​ ವ್ಯವಸ್ಥೆಯಿಂದ ಅವರು ಹೊರ ಬರ್ತಿಲ್ಲ.

ಚೆನ್ನೈನ ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯರು ಎಸ್​ಪಿಬಿ ಆರೋಗ್ಯದ ಮೇಲೆ ತೀವ್ರ ನಿಗಾ ಇಟ್ಟಿದ್ದು, ವೆಂಟಿಲೇಟರ್​​ ತೆಗೆಯದೇ ಟ್ರೀಟ್ಮೆಂಟ್ ಮಾಡುತ್ತಿದ್ದಾರೆ.

ಕಳೆದ 13ರಿಂದ ಎಸ್‌ಪಿಬಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ 7 ದಿನಗಳಿಂದ ಅವರು ಐಸಿಯುನಲ್ಲೇ ಇದ್ದಾರೆ. ಆರೋಗ್ಯದಲ್ಲಿ ಯಾವುದೇ ಗಮನಾರ್ಹ ಚೇತರಿಕೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಎಸ್​ಪಿಬಿ ರವರ ಆರೋಗ್ಯದ ಬಗ್ಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರು ಆಂತಕಕ್ಕೊಳಗಾಗಿದ್ದಾರೆ. ತಂದೆ ಯ ಆರೋಗ್ಯದ ಬಗ್ಗೆ ಎಸ್ ಪಿ ಬಿ ಪುತ್ರ ಎಸ್.ಪಿ ಚರಣ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುವುದರ ಮೂಲಕ ಮಾಹಿತಿ ನೀಡುತ್ತಿದ್ದಾರೆ.

ಈ ಮಧ್ಯೆ ಟಾಲಿವುಡ್​ ಮೆಗಾ ಸ್ಟಾರ್​ ಚಿರಂಜೀವಿ. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವರು ಎಸ್​ಪಿಬಿ ಅವ್ರ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

Comments are closed.