
ಅದೊಂದು ಕಾಲವಿತ್ತು. ನೀನು ಓದಿ ಮುಂದೇನು ಗುಡ್ಡೆ ಹಾಕ್ತಿಯಾ? ಅಂತ ಕೇಳುವವರೇ ಹೆಚ್ಚಿದ್ದರು. ಅದರಂತೆ ಅಂದೆಲ್ಲ ಪಿಯಿಸಿ ಓದುವುದೆಂದರೆ ಅದು ಈಗಿನ ಇಂಜಿನಿಯರಿಂಗ್ಗೆ ಸಮ. ಹಾಗೆಯೆ ಇಲ್ಲೊಬ್ಬರು ಪಿಯುಸಿವರೆಗೆ ಓದಿದ 44 ವರ್ಷ ವ್ಯಕ್ತಿ ನೀರಿನಿಂದ ಚಲಿಸುವ ಕಾರೊಂದನ್ನು ಸಿದ್ಧಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟಕ್ಕೂ ಇವರು ಯಾರು?, ಇಲ್ಲಿಯವರು? ಇಲ್ಲಿದೆ ಸಂಪೂರ್ಣ ಮಾಹಿತಿ.
ಅನೇಕರು ಡಿಗ್ರಿ ಓದಬೇಕು, ಇಂಜಿನಿಯರ್, ಡಿಪ್ಲೊಮಾ ಮಾಡಬೇಕು ಎಂದು ಹೆಸರಾಂತ ಕಾಲೇಜುಗಳಿಗೆ ಸೇರುತ್ತಾರೆ. ಕಾಲೇಜು ಜೀವನ ಮುಗಿದ ನಂತರ ನಾನು ಆ ಕಾಲೇಜಿನಲ್ಲಿ ಡಿಗ್ರಿ ಮಾಡಿದೆ, ಇಂಜಿನಿಯರ್ ಮಾಡಿದೆ ಎಂದು ಜಂಭ ಕೊಚ್ಚಿಕೊಳ್ಳುತ್ತಾರೆ. ಆದರೆ ಮಧ್ಯ ಪ್ರದೇಶದ 44 ವರ್ಷದ ಮೊಹಮ್ಮದ್ ರಯೀಸ್ ಮಾರ್ಕನಿ ಎಂಬವರು ನೀರಿನಿಂದ ಓಡಿಸಬಹುದಾದ ಕಾರನ್ನು ಕಂಡುಹಿಡಿದಿದ್ದಾರೆ.
ಮೊಹಮ್ಮದ್ ರಯೀಸ್ ಮಾರ್ಕನಿ ಓದಿದ್ದು ಪಿಯುಸಿ. ನಂತರ ಓದಲಾಗಲಿಲ್ಲ. ಹಾಗಾಗಿ ಬದುಕು ಕಟ್ಟಿ ಕೊಳ್ಳಲು ಕಾರ್ ಮೆಕ್ಯಾನಿಕ್ ವೃತ್ತಿ ಆರಂಭಿಸುತ್ತಾರೆ. ಇವರ ಸ್ವಂತ ಜಾಣ್ಮೆಯಿಂದ ನೀರಿನಲ್ಲಿ ಚಲಿಸುವ ಕಾರೊಂದನ್ನು ಸಿದ್ಧಪಡಿಸುತ್ತಾರೆ.
ಮೊಹಮ್ಮದ್ ರಯೀಸ್ ಮಾರ್ಕನಿ ಸಿದ್ಧಪಡಿಸಿದ ಕಾರು ಅಸಿಟಲೀನ್ ಅನಿಲದಲ್ಲಿ ಚಲಿಸುತ್ತದೆ. ಇದು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ನಡುವಿನ ರಾಸಾಯನಿಕದಿಂದ ಉತ್ಪತ್ತಿಯಾಗುತ್ತದೆ.
786ಸಿಸಿ ಎಂಜಿನ್ ಮಾರ್ಪಡಿಸಿ ನೀರಿನಿಂದ ಓಡಿಸಬಹುದಾದ ಕಾರನ್ನು ಸಿದ್ಧಪಡಿಸಿದ್ದಾರೆ. ಗಂಟೆಗೆ 50 ರಿಂದ 60 ಕಿ.ಮೀ ಓಡುವ ಸಾಮರ್ಥ್ಯ ಕಾರು ಹೊಂದಿದೆ. ಇನ್ನು ಈ ಕಾರು ಪರಿಸರ ಸ್ನೇಹಿಯಾಗಿದ್ದು, ಜನರ ಗಮನ ಸೆಳೆದಿದೆ.
ಅಷ್ಟು ಮಾತ್ರವಲ್ಲದೆ, ಕಾರನ್ನು ತನ್ನ ಮೊಬೈಲ್ನಲ್ಲಿ ಕಂಟ್ರೋಲ್ ಮಾಡಬಹುದಾದ ಸಿಸ್ಟಂ ಅಳವಡಿಸಿದ್ದಾರೆ. ಮಾರುತಿ ಸುಜುಕಿ ಕಾರನ್ನು ಬಳಸಿಕೊಂಡು ಈ ಕಾರನ್ನು ಸಿದ್ಧಪಡಿಸಿದ್ದಾರೆ.
Comments are closed.