ರಾಷ್ಟ್ರೀಯ

ಜಂಗಲ್​ ಬಾಯ್, ಕಾಡುಗಳ್ಳ ರಾಮ್​ಬಾಬು ಬಂಧನ

Pinterest LinkedIn Tumblr


ದೆಹಲಿ: ಕಾಡಿನಲ್ಲಿ ಅಡಗಿ, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತ ಜಂಗಲ್ ಬಾಯ್ ಎಂದೇ ಕುಖ್ಯಾತಿ ಪಡೆದಿದ್ದ ರಾಮ್​​ಬಾಬು ನನ್ನು ಪೊಲೀಸರು ಬಂಧಿಸಿದ್ದಾರೆ. ಸೈನಿಕ್ ಫಾರ್ಮ್ಸ್ ವಲಯದಿಂದ ಗುಂಡಿನ ಚಕಮಕಿ ನಡೆಸಿ ದೆಹಲಿ ಪೊಲೀಸರು ಸೋಮವಾರ ಆತನನ್ನು ಬಂಧಿಸಿದ್ದಾರೆ.
ಆರೋಪಿಯ ಸುಳಿವು ನೀಡಿದವರಿಗೆ 25 ಸಾವಿರ ರೂ. ಘೋಷಿಸಲಾಗಿತ್ತು. ಕೊಲೆ ಮತ್ತು ಕ್ರೂರ ಹಿಂಸೆ ಕೃತ್ಯ ಸೇರಿ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆತ ಪೊಲೀಸರಿಗೆ ಬೇಕಾಗಿದ್ದ.

ಆರೋಪಿ ಫರಿದಾಬಾದ್ ಅರಣ್ಯ ಪ್ರದೇಶದಿಂದ ಸೈನಿಕ್ ಫಾರ್ಮ್ಸ್ ನತ್ತ ತನ್ನ ಸಹಚರನನ್ನು ಭೇಟಿಯಾಗಲು ಬರಲಿದ್ದ ಎಂಬ ಸುಳಿವು ಸಿಕ್ಕಿತ್ತು. ಆತ ಮಾರಣಾಂತಿಕ ಶಸ್ತ್ರಾಸ್ತ್ರಗಳನ್ನೂ ಸಹ ತೆಗೆದುಕೊಂಡು ಹೋಗಬಹುದು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಮಾಹಿತಿಯ ಮೇರೆಗೆ ಪೊಲೀಸ್ ತಂಡ ಸೋಮವಾರ ಬೆಳಿಗ್ಗೆ ಸೈನಿಕ್ ಫಾರ್ಮ್ಸ್ ಪ್ರದೇಶದ ರಾಮ್-ಬಲರಾಮ್ ಜಮೀನಿನ ಬಳಿ ಬಲೆ ಹಾಕಿತು. ಪೊಲೀಸರು ಮದ್ದುಗುಂಡು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಹೊಂದಿದ್ದರು.

ಬೆಳಿಗ್ಗೆ 8.10 ಕ್ಕೆ ಆರೋಪಿ ಕಾಡಿನಿಂದ ಬರುತ್ತಿದ್ದಂತೆ, ಪೊಲೀಸ್ ತಂಡ ಆತನನ್ನು ಸುತ್ತುವರಿಯಿತು. ಆತನಿಗೆ ನಿಲ್ಲುವಂತೆ ಪೊಲೀಸರು ತಿಳಿಸಿದರೂ ಆತ ಪರಾರಿಯಾಗಲು ಯತ್ನಿಸಿದ. ಪೊಲೀಸರು ಆತನನ್ನು ಬೆನ್ನಟ್ಟುತ್ತಿದ್ದಂತೆ, ಆತ ಪೊಲೀಸ್ ಅಧಿಕಾರಿಗಳ ಮೇಲೆ ಮತ್ತೆ ಗುಂಡು ಹಾರಿಸಿದ, ನಂತರ ಆರೋಪಿಗೆ ಎಚ್ಚರಿಕೆ ನೀಡಲು ಪೊಲೀಸರು ಮೂರು ಸುತ್ತುಗಳನ್ನು ಗಾಳಿಯಲ್ಲಿ ಹಾರಿಸಿದರು. ಆದರೆ, ಆತ ಮತ್ತೊಂದು ಗುಂಡು ಹಾರಿಸಲು ಪ್ರಯತ್ನಿಸಿದಾಗ, ಆತನನ್ನು ಪೊಲೀಸ್ ಅಧಿಕಾರಿಗಳು ಆಕ್ರಮಿಸಿಕೊಂಡರು. ಕಾರ್ಯಾಚರಣೆ ವೇಳೆ ಗಾಯಗೊಂಡ ಪೇದೆಯೋಬ್ಬರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪೊಲೀಸರು ಆತನಿಂದ ನಾಡಪಿಸ್ತೂಲು ಮತ್ತು ಮೂರು ಸಜೀವ ಕಾರ್ಟ್​​ರಿಡ್ಜ್​​ಗಳನ್ನು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯವು ಅವನಿಗೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಮೇ 17 ರಂದು ಸಂಗಮ್ ವಿಹಾರ್ ನಿವಾಸಿ ರೋಹಿತ್ ಎಂಬ 21 ವರ್ಷದ ಯುವಕನ ಹತ್ಯೆಯಾಗಿತ್ತು. ಕೊಲೆಗೆ ಬಳಸಿದ ಶಸ್ತ್ರಾಸ್ತ್ರವನ್ನು ಆರೋಪಿ ರಾಮ್​​ಬಾಬು ಅಲಿಯಾಸ್ ಜಂಗಲ್ ಬಾಯ್‌ನಿಂದ ವಶಪಡಿಸಿಕೊಳ್ಳಲಾಗಿದೆ.

Comments are closed.