ರಾಷ್ಟ್ರೀಯ

ದೇಶದಲ್ಲಿ ಬಿಜೆಪಿ, ಆರ್ ಎಸ್ಎಸ್ ವಾಟ್ಸ್ ಆಪ್, ಫೇಸ್ ಬುಕ್ ನ್ನು ನಿಯಂತ್ರಿಸುತ್ತಿವೆ: ರಾಹುಲ್ ಗಾಂಧಿ

Pinterest LinkedIn Tumblr


ನವದೆಹಲಿ: ಭಾರತದಲ್ಲಿ ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ನ್ನು ಬಿಜೆಪಿ, ಆರ್ ಎಸ್ಎಸ್ ನಿಯಂತ್ರಿಸುತ್ತಿವೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ವೇದಿಕೆಯ ಮೂಲಕ ಸುಳ್ಳು ಸುದ್ದಿ, ದ್ವೇಷವನ್ನು ಹರಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಭಾರತದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವುದಕ್ಕಾಗಿ ಆರ್ ಎಸ್ಎಸ್ ಬಿಜೆಪಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ದ್ವೇಷ ಹರಡುತ್ತಿದೆ. ಅಂತಿಮವಾಗಿ ಅಮೆರಿಕದ ಮಾಧ್ಯಮ ಫೇಸ್ ಬುಕ್ ಗೆ ಸಂಬಂಧಿಸಿದಂತೆ ಸತ್ಯಾಂಶವನ್ನು ಹೊರಹಾಕಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Comments are closed.