ನವದೆಹಲಿ: ಉತ್ತರ ಪ್ರದೇಶ ಸಚಿವ, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಚೇತನ್ ಚೌಹಾನ್ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಕಳೆದ ತಿಂಗಳು ಚೇತನ್ ಚೌಹಾಣ್ ಗೆ ಕೊರೋನಾ ಸೋಂಕು ತಗುಲಿತ್ತು. ಈಗ ಬಹು ಅಂಗಾಂಗ ವೈಫಲ್ಯದಿಂದ ಮೇದಾಂತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಭಾರತ ಕ್ರಿಕೆಟ್ ತಂಡದ ಪರವಾಗಿ 40 ಟೆಸ್ಟ್ ಗಳಲ್ಲಿ ಚೇತನ್ ಚೌಹಾನ್ ಆಡಿದ್ದರು. 73 ವರ್ಷದ ಚೌಹಾಣ್ ಪತ್ನಿ ಹಾಗೂ ಓರ್ವ ಪುತ್ರ ವಿನಾಯಕ್ ನ್ನು ಅಗಲಿದ್ದಾರೆ. ಪುತ್ರ ವಿನಾಯಕ್ ಮೆಲ್ಬೋರ್ನ್ ನಲ್ಲಿದ್ದು ಭಾರತಕ್ಕೆ ಇನ್ನಷ್ಟೇ ಆಗಮಿಸಬೇಕಿದೆ.
ನನ್ನ ಸಹೋದರ ಚೇತನ್ ಚೌಹಾಣ್ ಇಹ ಲೋಕ ತ್ಯಜಿಸಿದ್ದಾರೆ. ಅವರ ಆರೋಗ್ಯ ಚೇತರಿಕೆ ಕಾಣುವುದಕ್ಕೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಚೌಹಾಣ್ ಅವರ ಸಹೋದರ ಪುಷ್ಪೇಂದ್ರ ಹೇಳಿದ್ದಾರೆ. ಚೌಹಾಣ್ ಸುನಿಲ್ ಗವಾಸ್ಕರ್ ಅವರಿಗೆ ದೀರ್ಘ ಕಾಲದ ಆರಂಭಿಕ ಜೊತೆಯಾಟಗಾರರಾಗಿದ್ದರು.
Comments are closed.