ರಾಷ್ಟ್ರೀಯ

ದೌರ್ಜನ್ಯದಿಂದ ಬೇಸತ್ತ ಪತ್ನಿಯಿಂದಲೇ ಕುಡುಕ ಪತಿಯ ಹತ್ಯೆ

Pinterest LinkedIn Tumblr


ಫತೇಗಢ ಸಾಹಿಬ್ (ಚಂದೀಗಢ): ಗಂಡನಿಂದ ನಿರಂತರ ಹಲ್ಲೆಗೊಳಗಾದ ಮಹಿಳೆಯೋರ್ವಳು ಬೇಸರಗೊಂಡು ಆತನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಈ ಘಟನೆ ಜಿಲ್ಲೆಯ ಬಾಸ್ಸಿ ಪಥಾನಾ ಬ್ಲಾಕ್‌ನಲ್ಲಿ ನಡೆದಿದೆ.
ಕರಮ್‌ಜಿತ್ ಸಿಂಗ್ ಅಲಿಯಾಸ್ ರಾಜು ಸಾವಿಗೀಡಾದವ. ಕಾಳೇರನ್ ಗ್ರಾಮದ ಆತ ರೈಲ್ವೆಯ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ.

ಆರೋಪಿ ಮಹಿಳೆಯನ್ನು ಕುಲದೀಪ್ ಕೌರ್ ಎಂದು ಗುರುತಿಸಲಾಗಿದೆ. ಆತನಿಂದ ದೌರ್ಜನ್ಯ ಅನುಭವಿಸಿದ ಆಕೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕೊಲೆಗೆ ಸಂಚು ರೂಪಿಸಿದ್ದಳೆಂದು ಆರೋಪಿಸಲಾಗಿದೆ. ಮಹಿಳೆಗೆ ಅವಳ ಮೂವರು ಸಂಬಂಧಿಕರು- ಮನಿಂದರ್ ಸಿಂಗ್, ಪರ್ವಿಂದರ್ ಸಿಂಗ್ ಮತ್ತು ಸಹೋದರ ಸನ್ನಿ ಸಹಾಯ ಮಾಡಿದ್ದಾರೆನ್ನಲಾಗಿದೆ.
10 ವರ್ಷಗಳ ಹಿಂದೆ ಕುಲದೀಪ್ ಕರಮ್ ಜಿತ್ ನನ್ನು ವಿವಾಹವಾದಳು. ಇದು ಪ್ರೇಮ ವಿವಾಹವಾಗಿದ್ದು, ದಂಪತಿಗೆ ಮೂವರು ಮಕ್ಕಳಿದ್ದರು. ಆದರೆ, ಕುಲದೀಪ್ ಕುಡಿದ ಮತ್ತಿನಲ್ಲಿ ಆಕೆ ಮೇಲೆ ಹಲ್ಲೆ ಮಾಡುತ್ತಿದ್ದ.

ಭಾನುವಾರ ಬೆಳಗ್ಗೆ, ಸನ್ನಿ ಕರಮ್ಜಿತ್ ನನ್ನು ದ್ವಿಚಕ್ರ ವಾಹನದಲ್ಲಿ ಮನೆಗೆ ಕರೆದೊಯ್ಯುತ್ತಿದ್ದ. ಅಮಲಿನಲ್ಲಿದ್ದ ಕರಮ್‌ಜಿತ್ ರಾತ್ರಿ ಕರ್ತವ್ಯದಿಂದ ಮನೆಗೆ ಮರಳುತ್ತಿದ್ದ.

ಇಬ್ಬರು ಹೋಗುವಾಗ ಕುಲದೀಪ್ ತನ್ನ ಗಂಡನನ್ನು ಮರದ ರಾಡ್‌ನಿಂದ ತಲೆಗೆ ಹೊಡೆದಳು. ಯಾವುದೇ ಸಿಸಿಟಿವಿ ಕ್ಯಾಮದರಾಗಳಿಲ್ಲದ ಲಿಂಕ್ ರಸ್ತೆಯ ಬಳಿ ವಾಹನ ಇದ್ದಾಗ ಈ ದಾಳಿ ನಡೆದಿದೆ.
ಅತಿಯಾದ ರಕ್ತಸ್ರಾವವಾಗಿದ್ದರಿಂದ ಕರಮ್‌ಜಿತ್ ಸ್ಥಳದಲ್ಲೇ ನಾವಿಗೀಡಾಗಿದ್ದಾನೆ. ಮಾಹಿತಿ ಸಿಕ್ಕ ನಂತರ ಪೊಲೀಸರು ಪ್ರಕರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿ ಮತ್ತು ಅದನ್ನು ಒಂದೇ ದಿನದಲ್ಲಿ ಪರಿಹರಿಸಿದರು. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಬಳಸಿದ ಮರದ ರಾಡ್ ಮತ್ತು ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Comments are closed.