ರಾಷ್ಟ್ರೀಯ

ಸೇರಂ ಇನ್​ಸ್ಟಿಟ್ಯೂಟ್ ನಿಂದ 225ರೂ.ಗೆ ಕರೊನಾ ಔಷಧ?

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಕರೊನಾ ಔಷಧವನ್ನು 225 ರೂಪಾಯಿಗೆ ಮಾರಾಟ ಮಾಡಲಾಗುವುದು ಎಂದು ಸೇರಂ ಇನ್​ಸ್ಟಿಟ್ಯೂಟ್ ತಿಳಿಸಿದೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಔಷಧವನ್ನು ಉತ್ಪಾದನೆ ಮಾಡಲಾಗುತ್ತಿದ್ದು, ದೇಶದ ಬಡವರಿಗೂ ಔಷಧ ತಲುಪುವಂತೆ ನೋಡಿಕೊಳ್ಳುವುದಾಗಿ ಸಂಸ್ಥೆ ತಿಳಿಸಿದೆ.

ಆಕ್ಸ್​ಫರ್ಡ್ ವಿವಿಯ ಔಷಧವನ್ನು ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಸೇರಂ ಇನ್​ಸ್ಟಿಟ್ಯೂಟ್ ತಯಾರಿಸುತ್ತಿದೆ. ಔಷಧದ ಉತ್ಪಾದನೆಗಾಗಿ ಬಿಲ್ ಆಂಡ್ ಮೆಲಿಂದಾ ಗೇಟ್ಸ್ ಪ್ರತಿಷ್ಠಾನದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಸೇರಂ ತಿಳಿಸಿದೆ. ಪ್ರತಿಷ್ಠಾನದಿಂದ 150 ಮಿಲಿಯನ್ ಡಾಲರ್​ನ್ನು ಪಡೆದುಕೊಂಡಿದ್ದು, 100 ಮಿಲಿಯನ್ ಡೋಸೇಜ್ ಔಷಧವನ್ನು ತಯಾರಿಸ ಲಾಗುತ್ತಿದೆ. ವಿಶ್ವಾದ್ಯಂತ ಒಟ್ಟು 92 ದೇಶಗಳಲ್ಲಿ ಔಷಧವನ್ನು ಮಾರಾಟ ಮಾಡಲಾಗುವುದು ಎಂದು ಸೇರಂ ಇನ್​ಸ್ಟಿಟ್ಯೂಟ್ ತಿಳಿಸಿದೆ.

9 ದಿನದಲ್ಲಿ 5 ಲಕ್ಷ ಪ್ರಕರಣ: ಭಾರತದಲ್ಲಿ ಕೇವಲ 9 ದಿನಗಳಲ್ಲಿ ಐದು ಲಕ್ಷ ಕರೊನಾ ಸೋಂಕು ದೃಢಪಟ್ಟಿದೆ. ಜುಲೈ 17ರಂದು 10 ಲಕ್ಷ ದಾಟಿದ್ದ ಪ್ರಕರಣ ಮೂರು ವಾರಗಳಲ್ಲಿ ದುಪ್ಪಟ್ಟಾಗಿದೆ. ಜುಲೈ 28ರಂದು ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿತ್ತು. ಅದಾದ ನಂತರ ಕೇವಲ ಒಂಬತ್ತು ದಿನಗಳಲ್ಲಿ 4.95 ಲಕ್ಷದಷ್ಟು ಪ್ರಕರಣಗಳು ವರದಿಯಾಗಿವೆ. ಕರೊನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈ ಒಂಬತ್ತು ದಿನಗಳಲ್ಲಿ 5.19 ಲಕ್ಷ ಪ್ರಕರಣಗಳು

ದೃಢವಾಗಿವೆ. 2ನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ ಭಾರತಕ್ಕಿಂತಲೂ ಕಡಿಮೆ ಅಂದರೆ 3.82 ಲಕ್ಷ ಪ್ರಕರಣಗಳು ಹೆಚ್ಚಳವಾಗಿವೆ. ದೇಶದಲ್ಲಿ ಜನವರಿ 30ರಂದು ಮೊದಲ ಕರೊನಾ ಪ್ರಕರಣ ಕಾಣಿಸಿಕೊಂಡಿತ್ತು. ಅದಾದ ನಂತರ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಲು 78 ದಿನ (ಮೇ 18) ಬೇಕಾಯಿತು. ಜೂನ್ 26ರಂದು, 39 ದಿನಗಳಲ್ಲಿ 4 ಲಕ್ಷ ಪ್ರಕರಣಗಳು ಪತ್ತೆಯಾಗಿ ಸೋಂಕಿತರ ಸಂಖ್ಯೆ 5

ಲಕ್ಷ ಮುಟ್ಟಿತ್ತು. ತದನಂತರ ಪ್ರಕರಣಗಳ ಸಂಖ್ಯೆ 20 ದಿನಗಳಲ್ಲಿ (ಜುಲೈ 16)

10 ಲಕ್ಷದ ಗಡಿ, 12 ದಿನಗಳಲ್ಲಿ (ಜುಲೈ 28) 15 ಲಕ್ಷದ ಗಡಿಯನ್ನು ದಾಟಿತ್ತು.

ಪಾಸಿಟಿವಿಟಿ ಹೆಚ್ಚಳ

ದೇಶದಲ್ಲಿ ಕರೊನಾ ಸೋಂಕಿನ ಪಾಸಿಟಿವಿಟಿ ಪ್ರಮಾಣ ಹೆಚ್ಚಾಗಿದೆ. ಗುರುವಾರದಂದು ಶೇ. 8.47ರಷ್ಟಿದ್ದ ಪಾಸಿಟಿವಿಟಿ ಪ್ರಮಾಣ ಶುಕ್ರವಾರ ದಂದು ಶೇ. 10.88ಕ್ಕೆ ಏರಿಕೆಯಾಗಿದೆ. ಈ ಹಿಂದೆ ಜುಲೈ 20ರಂದು ಶೇ. 15.79 ಪಾಸಿಟಿವಿಟಿ ಪ್ರಮಾಣ ವರದಿಯಾಗಿತ್ತು. ಪ್ರಸ್ತುತ ದೇಶದಲ್ಲಿ 10 ಲಕ್ಷ ಜನರಲ್ಲಿ 16,500 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರತಿದಿನ 6 ಲಕ್ಷ ಜನರಿಗೆ ಪರೀಕ್ಷೆ ಮಾಡಲಾಗು ತ್ತಿದೆ. ಇದುವರೆಗೆ ಪರೀಕ್ಷೆ ನಡೆಸಿದವರ ಸಂಖ್ಯೆ 2.27 ಕೋಟಿಗೂ ಹೆಚ್ಚಿದೆ.

Comments are closed.