ರಾಷ್ಟ್ರೀಯ

ಗುಟ್ಟಾಗಿ CCTV ಅಳವಡಿಸಿದ ಪತಿಗೆ ಗೊತ್ತಾಯಿತು ಪತ್ನಿಯ ‘ಇನ್ನೊಂದು ಮುಖ!

Pinterest LinkedIn Tumblr


CCTV ಇದು ಒಂದು ಅದ್ಭುತ ಅವಿಷ್ಕಾರವೇ ಹೌದು. ಇದರಿಂದ ಅನೇಕ ರೀತಿಯಲ್ಲಿ ಉಪಯೋಗವಾಗುತ್ತವೆ. ವಿಶೇಷವೆಂದರೆ CCTV ಇರುವ ಹೆದರಿಕೆಯಿಂದಾಗಿ ಆಗತಕ್ಕಂತಹ ಅಪರಾಧಗಳಿಗೆ ಎಷ್ಟೋ ಸಲ ತಡೆಯುಂಟಾಗುತ್ತದೆ. ಮತ್ತು ಅಪರಾಧಗಳನ್ನು ಮಾಡಿದ ಆರೋಪಿಗಳಿಗೆ ರೆಡ್ ಹ್ಯಾಂಡಾಗಿ ಹಿಡಿಯಲು ಸಾಕ್ಷಾಧಾರಗಳ ಉಪಯೋಗ ಸಹಿತ ಸರಿಯಾಗಿ ಆಗುತ್ತದೆ.

ಇಂಥ ಈ CCTV ಕ್ಯಾಮೆರಾದ ಉಪಯೋಗವನ್ನೇ ಒಬ್ಬ ಪತಿ ಹೇಗೆ ಉಪಯೋಗಿಸಿದ್ದಾನೆ ನೋಡಿ. ಘಟನೆ ಮಧ್ಯಪ್ರದೇಶದ ಬರೇಲಿಯಲ್ಲಿ ನಡೆದಿದೆ. ಇಲ್ಲಿ ವಾಸಿಸುತ್ತಿರುವ ದೀಪಕ್ ಮತ್ತು ಪೂನಮ್ ಹೆಸರಿನ ದಂಪತಿಗಳಿಗೆ ಒಂದು ವರ್ಷದ ಮಗುವಿತ್ತು. ಆತನ ನೆರೆಹೊರೆಯವರು ದೀಪಕ್ ನಿಗೆ, ‘ನೀವು ಆಫೀಸಿಗೆ ಹೋದಾಗ ನಿಮ್ಮ ಪತ್ನಿ ಮಗುವನ್ನು ತುಂಬಾ ಹೊಡೆಯುತ್ತಾಳೆ’ ಎಂದು ಹೇಳುತ್ತಿದ್ದರು. ‘ಮಗುವಿನ ಅಳುವ ಶಬ್ದ ಹೆಚ್ಚು ಕಡಿಮೆ ದಿನಾಲು ಕೇಳಿಯೇ ಬರುತ್ತದೆ’ ಎನ್ನುತ್ತಿದ್ದರು. ಇವರ ಮಾತನ್ನು ಕೇಳಿ ಮನೆಯಲ್ಲಿ ಪತ್ನಿಗೆ ಈ ವಿಷಯದ ಬಗ್ಗೆ ವಿಚಾರಿಸಿದಾಗ ಪತ್ನಿ ನೆರೆಯವರ ಜೊತೆಗೆ ಜಗಳಕ್ಕೆ ಇಳಿಯುತ್ತಿದ್ದಳು. ಮತ್ತು ಗಂಡನಿಗೆ, ನೆರೆಹೊರೆಯವರು ನಮ್ಮಿಬ್ಬರಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿರುತ್ತಾರೆ ನಿಮಗೆಲ್ಲ ಇದು ಅರ್ಥವಾಗಲ್ಲ ಎಂದು ದೂರುತ್ತಿದ್ದಳು.

ಇದಾದ ನಂತರ ಪತಿಯು ಇದು ಹೀಗೆ ನಡೆಯುತ್ತಿರುವದರಿಂದ ಒಂದು ನಿರ್ಧಾರಕ್ಕೆ ಬಂದು ಯಾರಿಗೂ ಹೇಳದೆ ಮನೆಯ ಬೆಡ್ ರೂಮಿನಲ್ಲಿ CCTV ಕ್ಯಾಮೆರಾ ಹಚ್ಚಿದನು. ಸತ್ಯ ತಿಳಿದಾಗ ಆತನು ಗಾಬರಿಯಾದನು. ಫುಟೇಜ್ ಗಳಲ್ಲಿ ಗೊತ್ತಾಯಿತು ಪೂನಮ್ ಳು ತನ್ನ ಮಗುವಿಗೆ ದೀಪಕನು ಮನೆಯಲ್ಲಿ ಇಲ್ಲದಾಗ ತುಂಬಾನೇ ಕೆಟ್ಟದಾಗಿ ಹೊಡೆಯುತ್ತಿದ್ದಳು. ತನ್ನ ಬಣ್ಣ ಬಯಲಾದ ನಂತರ ಅವಳು ನೇರ ತವರಿಗೆ ಹೋಗಿ ಗಂಡನ ವಿರುದ್ಧವೇ ಪೊಲೀಸರಲ್ಲಿ ಹಣಕ್ಕಾಗಿ ನನ್ನನ್ನು ಪಿಡಿಸುತ್ತಾನೆ ಎಂದು ತಾನೇ ತಕರಾರು ದಾಖಲಿಸಿದ್ದಾಳೆ. ಇದನ್ನು ನೋಡಿ ಗಂಡನೂ ಆಕೆಯ ವಿಡಿಯೋಗಳನ್ನು ಪೊಲೀಸರಿಗೆ ತೋರಿಸಿ ತನ್ನ ಪತ್ನಿಯ ವಿರುದ್ಧ ದೀಪಕ್ ಸಹಿತ ಕೇಸ್ ದಾಖಲಿಸಿದ. ಮುಂದಿನ ತನಿಖೆ ನಡೆಯುತ್ತಿದೆ.

Comments are closed.