ನವದೆಹಲಿ: ಧೂಮಪಾನ ವ್ಯಸನಿಗಳು ಕೋವಿಡ್-19 ರೋಗಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
ತಂಬಾಕು ಪದಾರ್ಥಗಳ ಸೇವನೆಯಿಂದಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸೋಂಕುಗಳು ಹೆಚ್ಚಾಗಲಿದ್ದು, ಕೋವಿಡ್-19 ಗೆ ತುತ್ತಾಗುವ ಸಾಧ್ಯತೆಗಳೂ ಹೆಚ್ಚಿರುತ್ತವೆ.
ಆರೋಗ್ಯ ಸಚಿವಾಲಯ ಪ್ರಕಟಿಸಿರುವ ಕೋವಿಡ್-19 ಸಾಂಕ್ರಾಮಿಕ ಹಾಗೂ ಭಾರತದಲ್ಲಿ ತಂಬಾಕು ಸೇವನೆ ಎಂಬ ಡಾಕ್ಯುಮೆಂಟ್ ನಲ್ಲಿ ತಜ್ಞರು ಹೇಳಿರುವ ಪ್ರಕಾರ ತಂಬಾಕು ಸೇವನೆಯಿಂದಾಗಿ ಶ್ವಾಸಕೋಶ ಹಾಳಾಗಿರುತ್ತದೆ, ಇಂತಹ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ಸುಲಭವಾಗಿ ತಗುಲುತ್ತದೆ.
ತಂಬಾಕು ಸೇವನೆ, ಧೂಮಪಾನದಿಂದಾಗಿ ಸಾಂಕ್ರಾಮಿಕವಲ್ಲದ ಶ್ವಾಸಕೋಶದ ಸಮಸ್ಯೆಗಳು (ಎನ್ ಸಿಡಿ) ಹೆಚ್ಚಾಗಲಿದ್ದು ಎನ್ ಸಿಡಿಯಿಂದಾಗಿ ಭಾರತದಲ್ಲಿ ಶೇ.63 ಸಾವುಗಳು ಇವುಗಳಿಂದಲೇ ಸಂಭವಿಸುತ್ತಿವೆ. ಕೋವಿಡ್-19 ಸೋಂಕು ತಗುಲಿದರೆ ಈ ರೀತಿಯ ಎನ್ ಸಿಡಿ ರೋಗಗಳು ವ್ಯಕ್ತಿಯಲ್ಲಿ ಮತ್ತಷ್ಟು ಉಲ್ಬಣವಾಗುತ್ತವೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
Comments are closed.