ನವದೆಹಲಿ: ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ ಪಿಎಫ್) ಸಬ್ ಇನ್ಸ್ ಪೆಕ್ಟರ್ ಹಿರಿಯ ಅಧಿಕಾರಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ಲೋಧಿ ಎಸ್ಟೇಟ್ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಕಳೆದ ರಾತ್ರಿ 10.30ರ ಹೊತ್ತಿಗೆ ದೆಹಲಿಯ 61, ಲೋಧಿ ಎಸ್ಟೇಟ್ ನ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನೀಡಿರುವ ಬಂಗಲೆಯಲ್ಲಿ ನಡೆದಿದೆ.ಸಬ್ ಇನ್ಸ್ ಪೆಕ್ಟರ್ ಕರ್ನೈಲ್ ಸಿಂಗ್(55 ವರ್ಷ) ಮತ್ತು ಹಿರಿಯ ಇನ್ಸ್ ಪೆಕ್ಟರ್ ದಶ್ರತ್ ಸಿಂಗ್(56ವ) ಮಧ್ಯೆ ತೀವ್ರ ಮಟ್ಟದಲ್ಲಿ ಮಾತಿನ ಚಕಮಕಿ ನಡೆದ ನಂತರ ಈ ಕೃತ್ಯವೆಸಗಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಇನ್ಸ್ ಪೆಕ್ಟರ್ ಅವರನ್ನು ತಮ್ಮ ಸರ್ವಿಸ್ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಂದು ನಂತರ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮು-ಕಾಶ್ಮೀರದ ಉದಂಪುರ್ ಮೂಲದ ಸಬ್ ಇನ್ಸ್ ಪೆಕ್ಟರ್ ಆಗಿದ್ದು ಇನ್ಸ್ ಪೆಕ್ಟರ್ ಹರ್ಯಾಣದ ರೊಹ್ಟಕ್ ನವರಾಗಿದ್ದಾರೆ.
ದುರ್ಘಟನೆ ನಡೆದು ಮಾಹಿತಿ ಸಿಗುತ್ತಲೇ ಅರೆ ಸೇನಾಪಡೆಯ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
Comments are closed.