ರಾಷ್ಟ್ರೀಯ

ಹೊಲಿದುಕೊಟ್ಟ ಅಂಡರ್​ವೇರ್ ಚಿಕ್ಕದಾಗಿದ್ದಕ್ಕೆ ಟೈಲರ್ ವಿರುದ್ಧ ದೂರು!

Pinterest LinkedIn Tumblr


ಜಾಗದ ವಿಚಾರ, ಕೌಟುಂಬಿಕ ಜಗಳ ಸೇರಿ ಸಾಕಷ್ಟು ಪ್ರಕರಣಗಳು ಕೋರ್ಟ್​ ಅಂಗಳಕ್ಕೆ ಬರುತ್ತವೆ. ಕೆಲವೊಮ್ಮೆ ಸಾಕಷ್ಟು ವಿಚಿತ್ರ ಪ್ರಕರಣಗಳನ್ನು ಕೋರ್ಟ್​ ನಿಭಾಯಿಸಬೇಕಾಗುತ್ತದೆ. ಇದಕ್ಕೆ ತಾಜಾ ಉದಾಹರಣೆ ಮಧ್ಯ ಪ್ರದೇಶದಲ್ಲಿ ನಡೆದ ಘಟನೆ. ಹೊಲಿದುಕೊಟ್ಟ ಅಂಡರ್​ವೇರ್​ ಚಿಕ್ಕದಾಯಿತು ಎಂದು ಟೈಲರ್​ ವಿರುದ್ಧ ಗ್ರಾಹಕ ಕೋರ್ಟ್​ ಮೆಟ್ಟಿಲೇರಿದ್ದಾನೆ. ಸದ್ಯ ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕೃಷ್ಣ ಕುಮಾರ್ ದುಬೆ ದೂರು ದಾಖಲಿಸಿದ ವ್ಯಕ್ತಿ. ಈತನ ವಯಸ್ಸು 46. ವೃತ್ತಿಯಲ್ಲಿ ಸೆಕ್ಯುರಿಟಿ ಗಾರ್ಡ್​. ಆದರೆ, ಲಾಕ್​ಡೌನ್​ನಿಂದ ಈತ ತನ್ನ ಉದ್ಯೋಗ ಕಳೆದುಕೊಂಡಿದ್ದ. ಹೀಗಾಗಿ, ಲಾಕ್​ಡೌನ್​ ವೇಳೆ ಜೀವನ ನಡೆಸುವುದು ಈತನಿಗೆ ಕಷ್ಟಕರವಾಗಿತ್ತು. ಹೀಗಾಗಿ, ಗೆಳೆಯನಿಂದ 1000 ಸಾವಿರ ರೂಪಾಯಿ ಪಡೆದಿದ್ದ ಈತ ಅಗತ್ಯ ವಸ್ತುಗಳನ್ನು ಕೊಂಡುಕೊಂಡಿದ್ದ.

ಈ ವೇಳೆ ಆತನಿಗೆ ಒಳ ವಸ್ತ್ರ ಬೇಕಾಗಿತ್ತು. ದುಡ್ಡು ಕೊಟ್ಟು ಕೊಂಡುಕೊಳ್ಳುವುದು ಎಂದರೆ ದುಬಾರಿ. ಹೀಗಾಗಿ ಒಂದು ದೊಡ್ಡ ಬಟ್ಟೆ ತೆಗೆದುಕೊಂಡಿದ್ದ ಕೃಷ್ಣ ಕುಮಾರ್​ ಅದರಿಂದ ಅಂಡರ್​ವೇರ್​ ಹೊಲಿದು ಕೊಡುವಂತೆ ಟೈಲರ್​ ಒಬ್ಬನನ್ನು ಸಂಪರ್ಕಿಸಿದ್ದ. ಆತ 70 ರೂಪಾಯಿ ಪಡೆದು ಅಂಡರ್​ವೇರ್​ ಹೊಲಿದು ಕೊಡುವ ಭರವಸೆ ನೀಡಿದ್ದ. ಅಂತೆಯೇ ಒಂದು ವಾರ ಬಿಟ್ಟು ಒಂದು ಅಂಡರ್​ವೇರ್​ ಸಿದ್ಧಗೊಂಡಿತ್ತು.

ಈ ಅಂಡರ್​ವೇರ್​ ತಂದು ಮನೆಯಲ್ಲಿ ಹಾಕಿ ನೋಡಿದಾಗ ಅದು ತುಂಬಾನೇ ಚಿಕ್ಕದಾಗಿತ್ತು. ಈ ಬಗ್ಗೆ ಟೈಲರ್​ ಬಳಿ ಕೇಳಿದರೆ ‘ಆತ ನೀವು ಎಷ್ಟು ಬಟ್ಟೆ ನೀಡಿದ್ದೀರೋ ಅದರಲ್ಲಿಯೇ ಅಡ್ಜಸ್ಟ್​ ಮಾಡಿ ಅಂಡರ್​ವೇರ್​ ಹೊಲಿದುಕೊಟ್ಟಿದ್ದೇನೆ’ ಎಂದಿದ್ದಾ. ಇದರಿಂದ ಸಿಟ್ಟಾದ ಕೃಷ್ಣ ಕುಮಾರ್​ ಹಣ ವಾಪಾಸು ನೀಡುವಂತೆ ಕೋರಿದ್ದ. ಆದರೆ, ಟೈಲರ್​ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಆತ ನೇರವಾಗಿ ಠಾಣೆಗೆ ದೂರು ನೀಡಲು ಮುಂದಾಗಿದ್ದ.

ಪೊಲೀಸರು ಕೇಸ್​ ಫೈಲ್​ ಮಾಡಲು ನಿರಾಕರಿಸಿದ್ದು, ಸ್ಥಳೀಯ ಕೋರ್ಟ್​ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈತ ಹಾಗೆಯೇ ಮಾಡಿದ್ದು, ಹಣ ವಾಪಾಸು ನೀಡುವಂತೆ ಸ್ಥಳೀಯ ಕೋರ್ಟ್​ ಟೈಲರ್​ಗೆ ಸೂಚಿಸಿದೆ. ಈ ಮೂಲಕ ಈತನಿಗೆ ನ್ಯಾಯ ದೊರೆತಿದೆ.

Comments are closed.