ರಾಂಚಿ: ಲಾಕ್‌ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಕೊರೊನಾ ಕಿರಿಕ್ ಕೊಂಚ ಜಾಸ್ತಿಯಾಗಿದೆ. ದಿನ ನಿತ್ಯ ಮೂವತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ದೃಢಪಡುತ್ತಿದ್ದಾರೆ. ಹಾಗೇ ಸಾವು ಕೂಡ ಸಂಭವಿಸುತ್ತಿದೆ. ಇದೀಗ ಕೊರೊನಾ ಸೋಂಕಿನಿಂದ ಒಂದೇ ಕುಟುಂಬದ 6 ಮಂದಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ಧನಾಬಾದ್‌ನಲ್ಲಿ ನಡೆದಿದೆ.
ಕತ್ರಾಸ್ ಪ್ರದೇಶದಲ್ಲಿ ವಾಸವಿದ್ದ ಈ ಕುಟುಂಬದ ಹಿರಿಯ ಸದಸ್ಯೆಯಾದ 88 ವರ್ಷದ ವೃದ್ಧೆ 15 ದಿನ ಹಿಂದೆ ಮೃತಪಟ್ಟಿದ್ದರು. 2 ವಾರಗಳ ಅವಧಿಯಲ್ಲಿ ಅವರ ಐವರು ಪುತ್ರರೂ ಸೋಂಕಿನಿಂದ ಮೃತಪಟ್ಟಿರುವುದು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಅನಗತ್ಯವಾಗಿ ಧನಾಬಾದ್ ನಗರಕ್ಕೆ ಬರಬೇಡಿ ಎಂದು ಜಿಲ್ಲಾಡಳಿತವು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಮನವಿ ಮಾಡಿದೆ.
ಜತೆಗೆ ಧನಾಬಾದ್ ಸಮೀಪದಲ್ಲಿರುವ ಪಶ್ಚಿಮ ಬಂಗಾಳ ಗಡಿಯನ್ನೂ ಬಂದ್ ಮಾಡಿದೆ. ಸದ್ಯ ದೇಶದಲ್ಲಿ ಕೊರೊನಾ ಬಾಧಿತರ ಸಂಖ್ಯೆ ಹನ್ನೊಂದು ಲಕ್ಷದ ಗಡಿ ದಾಟುತ್ತಿದ್ದು ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕೊರೊನಾ ತಡೆಯಲು ಇರುವುದು ಲಸಿಕೆಯೊಂದೆ ಮಾರ್ಗ. ಹೀಗಾಗಿ ಎಷ್ಟು ಬೇಗ ಆಗುತ್ತದೋ ಅಷ್ಟು ಬೇಗ ಲಸಿಕೆ ಕಂಡು ಹಿಡಿದರೆ ಉತ್ತಮ ಎನ್ನುವುದು ವೈದ್ಯಕೀಯ ಪರಿಣಿತರ ಅಭಿಪ್ರಾಯ.
Comments are closed.