ಗಜಿಯಾಬಾದ್: ಕಳೆದ ಸೋಮವಾರ ರಾತ್ರಿ ದೆಹಲಿ ಹತ್ತಿರ ಗಜಿಯಾಬಾದ್ ನಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಪತ್ರಕರ್ತ ವಿಕ್ರಮ್ ಜೋಷಿ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ.
ಕಳೆದ ಸೋಮವಾರ ರಾತ್ರಿ ವಿಕ್ರಮ್ ಜೋಷಿ ಅವರ ನಿವಾಸದ ಎದುರು ಇಬ್ಬರು ಪುತ್ರಿಯರ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ತನ್ನ ಇಬ್ಬರು ಪುತ್ರಿಯರೊಂದಿಗೆ ಬೈಕ್ ನಲ್ಲಿ ಮನೆಗೆ ಬರುತ್ತಿದ್ದ ವಿಕ್ರಮ್ ಜೋಷಿಯವರ ಮೇಲೆ ದುಷ್ಕರ್ಮಿಗಳ ಗುಂಪು ಬಂದು ಗುಂಡಿಕ್ಕಿ ಏಕಾಏಕಿ ದಾಳಿ ನಡೆಸಿತು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಾಯಿಸಿತಾದರೂ ಗಂಭೀರವಾಗಿ ಗಾಯಗೊಂಡಿದ್ದರಿಂದ ಬದುಕುಳಿಯಲಿಲ್ಲ.
ಪ್ರಕರಣ ಸಂಬಂಧ ಪೊಲೀಸರು ಇದುವರೆಗೆ 9 ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕುಟುಂಬ ಸದಸ್ಯರೊಬ್ಬರ ವಿರುದ್ಧ ವಿಕ್ರಮ್ ಜೋಷಿಯವರು ಕಿರುಕುಳ ದೂರು ನೀಡಿದ್ದ ನಾಲ್ಕು ದಿನಗಳ ನಂತರ ಅವರ ಮೇಲೆ ದಾಳಿ ನಡೆದಿತ್ತು.
Comments are closed.