ರಾಷ್ಟ್ರೀಯ

‘ಮೈ ಲಾರ್ಡ್’ ಬದಲು, ‘ಸರ್’ ಎಂದು ನನ್ನನ್ನು ಕರೆಯಿರಿ: ಕೋಲ್ಕತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

Pinterest LinkedIn Tumblr


ಕೋಲ್ಕತಾ: ಪಶ್ಚಿಮ ಬಂಗಾಳ ಮತ್ತು ಅಂಡಮಾನ್ ನಲ್ಲಿರುವ ಎಲ್ಲಾ ನ್ಯಾಯಾಂಗ ಸಿಬ್ಬಂದಿ ನನ್ನನ್ನು ಮೈ ಲಾರ್ಡ್ ಎಂದು ಕರೆಯುವುದು ಬೇಡ. ಬದಲಾಗಿ ಸರ್ ಎಂದು ಕರೆದರೆ ಸಾಕು ಎಂದು ಕೋಲ್ಕತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಬಿಎನ್ ರಾಧಾಕೃಷ್ಣನ್ ಅವರು ಹೇಳಿದ್ದಾರೆ.

ಈ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಅವರು ರಾಜ್ಯ ಮತ್ತು ಅಂಡಮಾನ್ ನಲ್ಲಿರುವ ಎಲ್ಲಾ ಜಿಲ್ಲಾ ನ್ಯಾಯಾಧೀಶರಿಗೆ ಮತ್ತು ಸ್ಥಳೀಯ ಕೋರ್ಟ್ ಗಳ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಮುಖ್ಯ ನ್ಯಾಯಾಧೀಶರನ್ನು ಮೈ ಲಾರ್ಡ್ ಬದಲು ಸರ್ ಎಂದು ಕರೆಯುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಇನ್ನುಮುಂದೆ ಜಿಲ್ಲಾ ನ್ಯಾಯಾಂಗದ ಅಧಿಕಾರಿಗಳು, ಹೈಕೋರ್ಟ್‌ನ ರಿಜಿಸ್ಟ್ರಾರ್ ಸೇರಿದಂತೆ ಎಲ್ಲರೂ ಮುಖ್ಯ ನ್ಯಾಯಮೂರ್ತಿಗಳನ್ನು ‘ಮೈ ಲಾರ್ಡ್’ ಅಥವಾ ‘ಲಾರ್ಡ್‌ಶಿಪ್’ ಬದಲಿಗೆ ‘ಸರ್’ ಎಂದು ಸಂಬೋಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Comments are closed.