ರಾಷ್ಟ್ರೀಯ

ಕಡಿಮೆ ಬೆಲೆಯ ಲಾವಾ ಸ್ಮಾರ್ಟ್ ಫೋನ್ ಬಿಡುಗಡೆ!

Pinterest LinkedIn Tumblr


ದೇಶಿಯ ಮೊಬೈಲ್ ಉತ್ಪಾದಕ ಸಂಸ್ಥೆ ಲಾವಾ, ಜು.09 ರಂದು ಪ್ರಾರಂಭಿಕ ಹಂತದ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದ್ದು ಸಂಸ್ಥೆಯ ಝೇಡ್ ಸರಣಿಗೆ ಮತ್ತೊಂದು ಮೊಬೈಲ್ ಸೇರ್ಪಡೆಯಾಗಿದೆ.

ಝೆಡ್ 61 ಹೊಸ ಸ್ಮಾರ್ಟ್ ಫೋನ್ ಆಗಿದ್ದು, 1.6GHz ಆಕ್ಟಾಕೋರ್ ಪ್ರೊಸೆಸರ್, 2 ಜಿಬಿ RAM, 16 ಜಿಬಿ (128 ಜಿಬಿವರೆಗೆ ವಿಸ್ತರಿಸಬಹುದಾದ) ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.

ಲಾವ ಝೆಡ್ 61 ನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ತಯಾರಿಸಲಾಗಿದೆ. ಪ್ರಾರಂಭಿಕ ದರದ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಹಾಗೂ ಆಕರ್ಷಕ ಲುಕ್ ಹೊಂದಿದ್ದು, ಮನರಂಜನಾ ಅಗತ್ಯತೆಗಳಿಗೆ ಅತ್ಯುತ್ತಮವಾದ ಫೋನ್ ಇದಾಗಿದೆ ಎಂದು ಲಾವಾ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥ ತೇಜೇಂದರ್ ಸಿಂಗ್ ಹೇಳಿದ್ದಾರೆ.

5.45-inch HD+ ಡಿಸ್ಪ್ಲೇ, ಮಿಡ್ ನೈಟ್ ಬ್ಲೂ ಹಾಗೂ ಕೆಂಪು ಬಣ್ಣಗಳಲ್ಲಿ ಲಭ್ಯವಿದೆ. 5 ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರಾ, 8 ಮೆಗಾ ಪಿಕ್ಸಲ್ ಹಿಂಭಾಗದ ಕ್ಯಾಮರಾವನ್ನು ಝೆಡ್-61 ಹೊಂದಿದೆ. 3100 ಎಂಎಹೆಚ್ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಇದರ ಬೆಲೆಯನ್ನು Rs 5,774 ರೂಗಳಿಗೆ ನಿಗದಿಪಡಿಸಲಾಗಿದೆ.

Comments are closed.