ರಾಯ್ಪುರ (ಜು. 5): ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಎಲ್ಲೋ ಹುಟ್ಟಿ, ಬೆಳೆದವರನ್ನು ಒಂದಾಗಿಸುವ ಮದುವೆ ಕೆಲವರ ಜೀವನವನ್ನು ಹಸನಾಗಿಸಿದರೆ, ಇನ್ನು ಕೆಲವರು ತೆಗೆದುಕೊಳ್ಳುವ ತಪ್ಪು ನಿರ್ಧಾರದಿಂದ ಜೀವನವನ್ನೇ ನರಕವಾಗಿಸುತ್ತದೆ. ಛತ್ತೀಸ್ಗಢದಲ್ಲಿ ವಿಚಿತ್ರ ಮದುವೆಯೊಂದು ನಡೆದಿದ್ದು, ಮಾವನೇ ತನ್ನ ಸೊಸೆಗೆ ತಾಳಿ ಕಟ್ಟಿ ವಿವಾಹವಾಗಿದ್ದಾರೆ!
ಛತ್ತೀಸ್ಗಢದ ಬಿಲಾಸ್ಪುರದ ನಿವಾಸಿಯಾಗಿರುವ ಕೃಷ್ಣ ರಜಪೂತ್ ಸಿಂಗ್ ತನ್ನ 22 ವರ್ಷದ ಸೊಸೆಯನ್ನು ಮದುವೆಯಾಗಿದ್ದಾನೆ. ಕಳೆದ ಎರಡು ವರ್ಷಗಳ ಹಿಂದೆ ಆ ವ್ಯಕ್ತಿಯ ಮಗ ಸಾವನ್ನಪ್ಪಿದ್ದ. ಹೀಗಾಗಿ, ಆತನ 22 ವರ್ಷದ ಸೊಸೆ ಒಂಟಿ ಜೀವನ ನಡೆಸುತ್ತಿದ್ದಳು. ಹೀಗಾಗಿ, ಆ ಕೃಷ್ಣ ರಜಪೂತ್ ಸಿಂಗ್ ತನ್ನ ವಿಧವೆ ಸೊಸೆಯನ್ನು ಮದುವೆಯಾಗಿದ್ದಾನೆ. ಅವರ ಕುಟುಂಬದ ಹಿರಿಯರೇ ನಿಂತು ಈ ಮದುವೆ ಮಾಡಿಸಿದ್ದಾರೆ.
2 ವರ್ಷಗಳಿಂದ ಏಕಾಂತದ ಜೀವನ ನಡೆಸುತ್ತಿದ್ದ ಆರತಿ ಸಿಂಗ್ಗೆ ಆಕೆಯ ಗಂಡನ ಅಪ್ಪನ ಜೊತೆಯೇ ಮದುವೆ ಮಾಡಿಸಲಾಗಿದೆ. ಆಕೆಯ ಮಾವನೇ ಆಕೆಯನ್ನು ಹೆಚ್ಚು ಮುತುವರ್ಜಿಯಿಂದ ನೋಡಿಕೊಳ್ಳುತ್ತಾನೆ ಎಂಬ ಕಾರಣಕ್ಕೆ ಈ ಮದುವೆ ಮಾಡಿಸಲಾಗಿದೆ. ಗಂಡ ಸತ್ತ ಬಳಿಕ ಕಳೆದ 2 ವರ್ಷಗಳಿಂದ ಮಾವ ತನ್ನ ಬಗ್ಗೆ ತೋರುತ್ತಿದ್ದ ಕಾಳಜಿಯನ್ನು ನೋಡಿ ಆಕೆಯೂ ಮದುವೆಗೆ ಒಪ್ಪಿದ್ದಾಳೆ. ಕೊರೋನಾ ಭೀತಿಯಿಂದ ಸರಳವಾಗಿ ಮದುವೆ ನೆರವೇರಿಸಲಾಗಿದೆ.
Comments are closed.