ರಾಷ್ಟ್ರೀಯ

ದೇಶದಲ್ಲಿ ಇಂದು (ಗುರುವಾರ) 19 ಸಾವಿರ ಕೊರೋನಾ ಪ್ರಕರಣಗಳು​​ ಪತ್ತೆ, 434 ಸಾವು

Pinterest LinkedIn Tumblr


ನವದೆಹಲಿ(ಜು.02): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಆದರೀಗ, ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ತೆಗೆ ಮಾತ್ರ ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 6 ಲಕ್ಷದ ಗಡಿ ದಾಟಿ ಮುಂದೆ ಹೋಗಿದೆ.

ಭಾರತದಲ್ಲಿ ಜೂನ್ 26ರಿಂದ 18 ಸಾವಿರಕ್ಕೂ ಹೆಚ್ಚು ಕೋವಿಡ್​-19 ಪ್ರಕರಣಗಳು ವರದಿಯಾಗತೊಡಗಿವೆ. ಇದೀಗ‌ 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.‌ ಜುಲೈ 1ರಂದು 19,148 ಪ್ರಕರಣಗಳು ಕಂಡುಬಂದಿವೆ. ದೇಶದ ಕೊರೊನಾ ಪೀಡಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಬುಧವಾರ 434 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 17,834ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 3,59,860 ಜನ ಮಾತ್ರ. ದೇಶದಲ್ಲಿ ಇನ್ನೂ 2,26,947 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 1ರಂದು 8,171, ಜೂನ್ 2ರಂದು 8,909, ಜೂನ್ 3ರಂದು 9,304, ಜೂನ್ 4ರಂದು 9,851, ಜೂನ್ 5ರಂದು 9,887, ಜೂನ್ 6ರಂದು 9,971, ಜೂ 7ರಂದು 9,983, ಜೂನ್ 8ರಂದು 9987, ಜೂನ್‌ 9ರಂದು 9,985, ಜೂನ್ 10ರಂದು 9,996, ಜೂನ್ 11ರಂದು 10,956, ಜೂನ್ 12ರಂದು‌ 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್‌ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821, ಜೂನ್ 22ರಂದು 14,933, ಜೂನ್ 23ರಂದು 15,968, ಜೂನ್ 24ರಂದು‌ 16,922, ಜೂನ್ 25ರಂದು 17,296, ಜೂನ್ 26ರಂದು 18,552, ಜೂನ್ 27ರಂದು 19,906, ಜೂನ್ 28ರಂದು 19,459, ಜೂನ್ 29ರಂದು 18,522, ಜೂನ್ 30ರಂದು 18,653 ಹಾಗೂ ಜುಲೈ 1ರಂದು 19,148 ಹೊಸ ಪ್ರಕರಣಗಳು ಪತ್ತೆಯಾಗಿವೆ.

Comments are closed.