ರಾಷ್ಟ್ರೀಯ

WhatsApp ತೆರೆಯದೆ ಅದರಲ್ಲಿನ ಸಂದೇಶವನ್ನು ಸಿಕ್ರೆಟ್ ಆಗಿ ಓದುವ ಟ್ರಿಕ್

Pinterest LinkedIn Tumblr


ನವದೆಹಲಿ: ನೀವು ನಿಮ್ಮ ವಾಟ್ಸ್ ಆಪ್ ನಲ್ಲಿ ಬಂದ ಸಂದೇಶವನ್ನು ಓದಿದಾಗಲೆಲ್ಲಾ, ನೀಲಿ ಬಣ್ಣದ ರೈಟ್ ಮಾರ್ಕ್ ಸಂದೇಶ ಕಳುಹಿಸಿದವರ ಬಳಿ ಹೋಗುತ್ತದೆ. ಇದರಿಂದ ಸಂದೇಶ ಕಳುಹಿಸಿದವರಿಗೆ ನೀವು ಅವರು ಕಳುಹಿಸಿದ ಸಂದೇಶ ಓದಿರುವಿರಿ ಎಂಬುದು ಗೊತ್ತಾಗುತ್ತದೆ. ಆದರೆ, ಹಲವು ಬಾರಿ ನಾವು ಸಂದೇಶವನ್ನು ಓದಲು ಬಯಸುತ್ತೇವೆ. ಆದರೆ, ನಾವು ಸಂದೇಶ ಓದಿರುವ ಕುರಿತು ಸಂದೇಶ ಕಳುಹಿಸಿದವರಿಗೆ ತಿಳಿಸಲು ಬಯಸುವುದಿಲ್ಲ. ಅಂದರೆ, ಸಂದೇಶ ಕಳುಹಿಸಿದವರಿಗೆ ಬ್ಲೂ ಟಿಕ್ ಕಳುಹಿಸಲು ಬಯಸುವುದಿಲ್ಲ. ಇಂದು ನಾವು ಇಂತಹುದೇ ಒಂದು ಟ್ರಿಕ್ ಕುರಿತು ಮಾಹಿತಿ ನೀಡುತ್ತಿದ್ದು, ಈ ಟ್ರಿಕ್ ಬಳಸಿ ನೀವು ಬಂದ ಸಂದೇಶ ಕೂಡ ಓದಬಹುದು ಹಾಗೂ ನೀಲಿ ಬಣ್ಣದ ಚಿಹ್ನೆ ಕೂಡ ಸಂದೇಶ ಕಳುಹಿಸಿದವರಿಗೆ ಹೋಗುವುದಿಲ್ಲ.

ಸಂದೇಶವನ್ನು ಸಿಕ್ರೆಟ್ ಆಗಿ ಓದುವ ಟ್ರಿಕ್ ಇಲ್ಲಿದೆ
– ಫೋನ್ ಸ್ಕ್ರೀನ್ ಮೇಲೆ ವಾಟ್ಸಾಪ್ ಸಂದೇಶವನ್ನು ನಿರೀಕ್ಷಿಸಿ.
– ಸಂದೇಶ ಬಂದ ಬಳಿಕ ನೋಟಿಫಿಕೇಶನ್ ಪ್ಯಾನಲ್ ನಲ್ಲಿ ಸ್ವೀಕರಿಸಿದ ಸಂದೇಶವನ್ನು ಈಗ ದೀರ್ಘಕಾಲದವರೆಗೆ ಒತ್ತಿ ಹಿಡಿಯಿರಿ
– ಹೀಗೆ ಮಾಡುವುದರಿಂದ, ಸಂದೇಶವು ಪರದೆಯ ಮೇಲೆಯೇ ತೆರೆದುಕೊಳ್ಳುತ್ತದೆ ಮತ್ತು ನೀವು ಸಂಪೂರ್ಣ ಸಂದೇಶವನ್ನು ಅಲ್ಲಿಯೇ ಓದಬಹುದು.
– ಈ ಟ್ರಿಕ್ ಪ್ರಯತ್ನಿಸುವಾಗ ನಿಮಗೆ ವಾಟ್ಸಪ್ ತೆರೆಯುವ ಅವಶ್ಯಕತೆ ಇಲ್ಲ .
– ಅಲ್ಲದೆ, ಸಂದೇಶ ಕಳುಹಿಸಿದವರಿಗೆ ನೀಲಿ ಬಣ್ಣದ ಟಿಕ್ ಮಾರ್ಕ್ ಕೂಡ ಹೋಗುವುದಿಲ್ಲ.

Comments are closed.