ರಾಷ್ಟ್ರೀಯ

ದೂರು ನೀಡಲು ಬಂದವಳ ಎದುರೇ ಪೊಲೀಸ್ ಅಧಿಕಾರಿಯ ಹಸ್ತ ಮೈಥುನ!

Pinterest LinkedIn Tumblr


ಲಖನೌ (ಜು.1): ಉತ್ತರ ಪ್ರದೇಶದಲ್ಲಿ ದೂರು ನೀಡಲು ಬಂದ ಮಹಿಳೆಯ ಎದುರೇ ಪೊಲೀಸ್​ ಅಧಿಕಾರಿ ಹಸ್ತ ಮೈಥುನ ಮಾಡಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿ ಆತನನ್ನು ಸಸ್ಪೆಂಡ್​ ಮಾಡಲಾಗಿದೆ.

ಭೀಷ್ಮ ಪಾಲ್​​ ಸಿಂಗ್​ ಸಸ್ಪೆಂಡ್​ ಆದ ಅಧಿಕಾರಿ. ಉತ್ತರ ಪ್ರದೇಶದ ಡೋರಿಯಾ ಭಾಗದ ಠಾಣೆಯಲ್ಲಿ ಇತ್ತೀಚೆಗೆ ಮಹಿಳೆಯೋರ್ವಳು ಭೂ ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದಿದ್ದಳು. ಆಕೆಯನ್ನು ಸ್ಟೇಷನ್​ ಒಳಗೆ ಬರ ಮಾಡಿಕೊಂಡ ಠಾಣಾಧಿಕಾರಿ ಭೀಷ್ಮ ಪಾಲ್​​ ಸಿಂಗ್​, ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿದ್ದ. ಈ ವೇಳೆ ಆತ ಅಸಭ್ಯವಾಗಿ ನಡೆದುಕೊಳ್ಳಲು ಆರಂಭಿಸಿದ್ದ.

ಮಹಿಳೆಯನ್ನು ಎದುರು ಕೂರಿಸಿ ಈತ ತನ್ನ ಖಾಸಗಿ ಭಾಗವನ್ನು ಪದೇ ಪದೇ ಮುಟ್ಟಿಕೊಳ್ಳುತ್ತಿದ್ದ. ಈ ಬಗ್ಗೆ ಮಹಿಳೆ ಗಮನ ವಹಿಸದೇ ಇದ್ದಾಗ ಆತ ಖಾಸಗಿ ಭಾಗವನ್ನು ಮುಟ್ಟಿಕೊಳ್ಳುವುದನ್ನು ಹೆಚ್ಚು ಮಾಡಿದ್ದ. ಮಹಿಳೆ ಈ ಘಟನೆಯನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಪೊಲೀಸ್​ ಮಾಡಿದ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಸಸ್ಪೆಂಡ್​ ಮಾಡಲಾಗಿದೆ.

ಮೇಲಧಿಕಾರಿಗಳಿಗೆ ಸಂತ್ರಸ್ತೆ ಈ ಬಗ್ಗೆ ದೂರು ನೀಡಿದ್ದಾಳೆ. ಭೀಷ್ಮ ಪಾಲ್​ ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ನಾನು ಲಕ್ಷ್ಯಕ್ಕೆ ತೆಗೆದುಕೊಂಡಿರಲಿಲ್ಲ. ನನ್ನ ಸಂಬಂಧಿಗೂ ಈತ ಹಾಗೆಯೇ ಮಾಡಿದ್ದ. ಹೀಗಾಗಿ, ನಾನು ಮೇಲಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ಆಕೆ ತಿಳಿಸಿದ್ದಾಳೆ.

Comments are closed.