ರಾಷ್ಟ್ರೀಯ

ಬಿಹಾರ: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 80 ಮಂದಿಗೆ ಕೊರೋನಾ, ಮದುಮಗ ಸಾವು!

Pinterest LinkedIn Tumblr


ಪಾಟ್ನ: ಕೊರೋನಾ ವೈರಸ್ ಕುರಿತಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದರು, ಹಲವೆಡೆ ಜನರು ಆತಂಕವಿಲ್ಲದೆ ವರ್ತಿಸುತ್ತಿದ್ದಾರೆ. ಬಿಹಾರದ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ 300 ಮಂದಿ ಪೈಕಿ ಇದೀಗ 80 ಮಂದಿಯಲ್ಲಿ ಕೊರೋನಾ ದೃಢಪಟ್ಟಿರುವುದು ಬೆಳಕಿಗೆ ಬಂದಿದೆ.

ಪಾಟ್ನದ ಪಾಲಿಗಂಜ್ ಎಂಬ ಪ್ರದೇಶದಲ್ಲಿ ಜೂನ್.15ರಂದು ವಿವಾಹ ಸಮಾರಂಭ ನಡೆದಿದ್ದು, ಸಮಾರಂಭದಲ್ಲಿ ಭಾಗಿಯಾಗಿದ್ದ 80 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವಕ ಸಾಫ್ಟ್’ವೇರ್ ಇಂಜಿನಿಯರ್ ಆಗಿದ್ದು, ಮದುವೆ ಹಿನ್ನೆಲೆಯಲ್ಲಿ ದೆಹಲಿಯಿಂದ ಗ್ರಾಮಕ್ಕೆ ಜೂನ್.12ರಂದು ಆಗಮಿಸಿದ್ದ. ಜೂನ್. 15ರಂದು ಅದ್ಧೂರಿಯಾಗಿ ವಿವಾಹ ನಡೆದಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಯುವಕನಲ್ಲಿ ಅತೀವ್ರ ಜ್ವರ ಹಾಗೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಯುವಕನಲ್ಲಿ ಕೊರೋನಾ ದೃಢಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಇದೀಗ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ 80 ಮಂದಿಯಲ್ಲೂ ಕೊರೋನಾ ದೃಢಪಟ್ಟಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ವಿವಾಹ ಸಮಾರಂಭದಲ್ಲಿ ಜನರು ಇಷ್ಟೊಂದು ಮಟ್ಟದಲ್ಲಿ ಪಾಲ್ಗೊಂಡಿದ್ದರೂ ಯಾವುದೇ ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿವಾಹದಲ್ಲಿ ಪಾಲ್ಗೊಂಡಿದ್ದ ಜನರು ಇರುವ ಪ್ರದೇಶಗಳನ್ನು ಈಗಾಗಲೇ ಸೀಲ್’ಡೌನ್ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡುವ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ಪಾಲಿಗಂಜ್ ಬಿಡಿಒ ಚಿರಂಜೀವಿ ಪಾಂಡೆಯವರು ಹೇಳಿದ್ದಾರೆ.

Comments are closed.