ರಾಷ್ಟ್ರೀಯ

ದೇಶದಲ್ಲಿ ಒಂದೇ ದಿನ 407 ಜನರನ್ನು ಬಲಿಪಡೆದುಕೊಂಡ ಕೊರೋನಾ !

Pinterest LinkedIn Tumblr

ನವದೆಹಲಿ: ಶುಕ್ರವಾರ ದೇಶದಲ್ಲಿ ಕೊರೋನಾ ತನ್ನ ವ್ಯಾಪಕತೆಯನ್ನು ತೋರಿದ್ದು, ಒಂದೇ ದಿನ 407 ಜನರನ್ನು ಬಲಿಪಡೆದುಕೊಂಡಿದೆ. ಇದರೊಂದಿಗೆ ಈ ವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 15,301ಕ್ಕೆ ತಲುಪಿದೆ. ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಸಾವು ದಾಖಲಾದ ದೇಶಗಳ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದುಕೊಂಡಿದೆ.

ಶುಕ್ರವಾರ ಮಹಾರಾಷ್ಟ್ರದಲ್ಲಿ 192, ದೆಹಲಿಯಲ್ಲಿ 64, ತಮಿಳುನಾಡು 45, ಗುಜರಾತ್ 18, ಉತ್ತರಪ್ರದೇಶದಲ್ಲಿ 15 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗಿದ್ದಾರೆ.

ಈ ನಡುವೆ ಕಳೆದ 24 ಗಂಟೆಗಳಲ್ಲಿ 17,296 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,90,401ಕ್ಕೆ ತಲುಪಿದೆ. ಇನ್ನು 4,90,401 ಮಂದಿ ಸೋಂಕಿತರ ಪೈಕಿ 2,85,637 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ರಾಷ್ಟ್ರದಲ್ಲಿನ್ನೂ 1,89,463 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.

ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 4842, ದೆಹಲಿಯಲ್ಲಿ 3390, ತಮಿಳುನಾಡಿನಲ್ಲಿ 3509, ಉತ್ತರಪ್ರದೇಶ 636, ಆಂಧ್ರಪ್ರದೇಶದಲ್ಲಿ 553, ಪಶ್ಚಿಮ ಬಂಗಾಳದಲ್ಲಿ 475 ಮಂದಿಗೆ ಹೊಸದಾಗಿ ಕೊರೋನಾ ವ್ಯಾಪಿಸಿದೆ.

Comments are closed.