ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಇಬ್ಬರು ರಾಜತಾಂತ್ರಿಕ ಸಿಬ್ಬಂದಿ ದಿಢೀರ್ ನಾಪತ್ತೆ !

Pinterest LinkedIn Tumblr

ನವದೆಹಲಿ/ಇಸ್ಲಾಮಾಬಾದ್: ಈ ಹಿಂದೆ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಯನ್ನು ಐಎಸ್ಐ ಏಜೆಂಟ್ ಓರ್ವ ಹಿಂಬಾಲಿಸಿದ್ದು ಆತಂಕಕ್ಕೀಡು ಮಾಡಿತ್ತು. ಇದೀಗ ಭಾರತದ ಇಬ್ಬರು ರಾಜತಾಂತ್ರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.

ಕಳೆದ ಎರಡು ಗಂಟೆಗಳಿಂದ ಪಾಕಿಸ್ತಾನದ ಇಬ್ಬರು ಭಾರತೀಯ ಹೈಕಮಿಷನ್ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಈ ಸಂಬಂಧ ಪಾಕಿಸ್ತಾನ ಅಧಿಕಾರಿಗಳೊಂದಿಗೆ ಭಾರತ ಸರ್ಕಾರ ಈ ವಿಷಯ ಕುರಿತಾಗಿ ಚರ್ಚೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಹೈಕಮಿಷನ್ ಸಿಬ್ಬಂದಿ ಇಬ್ಬರೂ ಸಿಐಎಸ್ಎಫ್ ಚಾಲಕರಾಗಿದ್ದರು. ಈ ಇಬ್ಬರು ಇಸ್ಲಾಮಾಬಾದ್‌ನಲ್ಲಿ ಕರ್ತವ್ಯದಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ. ಬೆಳಗ್ಗೆ ಮನೆಯಿಂದ ಹೊರಟ ಅವರು ಕಚೇರಿಗೆ ಬಂದಿಲ್ಲ. ಇದು ಸದ್ಯದ ಮಟ್ಟಿಗೆ ಆಂತಕಕ್ಕೀಡಾಗಿದೆ.

ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮಾಜಿ ರಾಜತಾಂತ್ರಿಕ ಶರತ್ ಸಬರ್ವಾಲ್ ಅವರು ನೀತಿ ಸಂಹಿತೆಯನ್ನು ಪಾಲಿಸದ ಕಾರಣ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Comments are closed.