ರಾಷ್ಟ್ರೀಯ

ದುಬೈನಲ್ಲಿ 9 ಲಕ್ಷ ಉದ್ಯೋಗ ನಷ್ಟ, ಕೊಲ್ಲಿ ರಾಷ್ಟ್ರಗಳಿಂದ ತಾಯ್ನಾಡಿಗೆ ಮರಳುತ್ತಿರುವ ಭಾರತೀಯರು

Pinterest LinkedIn Tumblr


ಹೊಸದಿಲ್ಲಿ: ಕೋವಿಡ್‌-19 ಬಿಕ್ಕಟ್ಟು ಹಾಗೂ ತೈಲ ದರ ಕುಸಿತದ ಪರಿಣಾಮ ಕೊಲ್ಲಿ ರಾಷ್ಟ್ರಗಳಿಂದ ನಿರ್ಗಮಿಸುತ್ತಿರುವ ವಿದೇಶಿಯರ ಸಂಖ್ಯೆ ಹೆಚ್ಚುತ್ತಿದೆ. ಆಕ್ಸ್‌ಫರ್ಡ್‌ ಎಕನಾಮಿಕ್ಸ್‌ ಪ್ರಕಾರ ದುಬೈ ಒಂದರಲ್ಲಿಯೇ 9 ಲಕ್ಷ ಉದ್ಯೋಗ ನಷ್ಟ ಸಾಧ್ಯತೆ ಇದೆ.

ಆಕ್ಸ್‌ಫರ್ಡ್‌ ಎಕನಾಮಿಕ್ಸ್‌ ವರದಿಯ ಪ್ರಕಾರ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರೆ ಯುಎಇನ ಆರ್ಥಿಕತೆಗೂ ಹೊಡೆತ ಬೀಳುವ ಸಂಭವ ಇದೆ. ಯುಎಇನಲ್ಲಿ 96 ಲಕ್ಷ ಜನಸಂಖ್ಯೆ ಇದೆ.

ಕೋವಿಡ್‌ 19 ಬಿಕ್ಕಟ್ಟು ಪರಿಣಾಮ ಕೊಲ್ಲಿ ರಾಷ್ಟ್ರದಲ್ಲಿ ಸಂಕಷ್ಟದಲ್ಲಿರುವ ಭಾರತೀಯರು, ಪಾಕಿಸ್ತಾನ, ಬಂಗ್ಲಾದೇಶ ಮೂಲದ ಜನತೆ ತಾಯ್ನಾಡಿಗೆ ಹಿಂತಿರುಗುತ್ತಿದ್ದಾರೆ. ಈ ರೀತಿಯ ವಲಸೆಯಿಂದ ಕೊಲ್ಲಿ ರಾಷ್ಟ್ರಕ್ಕೂ ಸಮಸ್ಯೆ ಉಂಟಾಗಲಿದೆ. ಏಕೆಂದರೆ ಅಲ್ಲಿನ ಆರ್ಥಿಕ ಬೆಳವಣಿಗೆಯಲ್ಲಿ ವಿದೇಶಿ ಕಾರ್ಮಿಕರ ಕೊಡುಗೆಯೂ ಇದೆ ಎಂದು ವರದಿ ತಿಳಿಸಿದೆ.

ಕೆಲ ಕೊಲ್ಲಿ ರಾಷ್ಟ್ರಗಳ ನಾಯಕರು ವಿದೇಶಿ ಕಾರ್ಮಿಕರಿಗೆ ನಿರ್ಗಮಿಸಲೂ ಉತ್ತೇಜನ ನೀಡುತ್ತಿದ್ದಾರೆ. ಕುವೈತ್‌ ಪ್ರಧಾನಿ ಸಬಾಹ್‌ ಖಲೀದ್‌ ಸಬಾಹ್‌ ಅಂಥವರಲ್ಲೊಬ್ಬರು. ಕುವೈತ್‌ ಜನಸಂಖ್ಯೆಯಲ್ಲಿ 70 ಪರ್ಸೆಂಟ್‌ ಮಂದಿ ಹೊರಗಿನವರು. ಇದನ್ನು 30 ಪರ್ಸೆಂಟ್‌ ಗೆ ಇಳಿಸಬೇಕು. ವಿದೇಶಿಯರು ನಿರ್ಗಮಿಸಿದರೆ ಸ್ಥಳೀಯರಿಗೆ ಉದ್ಯೋಗಾವಕಾಶವೂ ಸಿಗುತ್ತದೆ ಎಂದು ಕುವೈತ್‌ ಪ್ರಧಾನಿ ತಿಳಿಸಿದ್ದಾರೆ.

ವಿದೇಶಿ ಮೂಲದ ಜನತೆಯ ನಿರ್ಗಮನದಿಂದ ರೆಸ್ಟೊರೆಂಟ್‌, ಶಾಲೆಗಳು, ಕ್ಲಿನಿಕ್‌ಗಳು, ಲಕ್ಸುರಿ ಗೂಡ್ಸ್‌ ಇತ್ಯಾದಿ ವಲಯಗಳಿಗೆ ಹೊಡೆತ ಬಿದ್ದಿದೆ. ಸರಕಾರದ ನೆರವು ಇಲ್ಲದೆ ಈ ವಲಯಗಳಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಎಂದು ವರದಿಯಾಗಿದೆ.

Comments are closed.