ರಾಷ್ಟ್ರೀಯ

ದೇಶದಲ್ಲಿ 24 ಗಂಟೆಯಲ್ಲಿ 6,767 ಕೊರೋನಾ ಪ್ರಕರಣಗಳು​ ಪತ್ತೆ

Pinterest LinkedIn Tumblr


ನವದೆಹಲಿ(ಮೇ.24): ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್​ ಹಾವಳಿ ಭಾರತದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 6767 ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳು ಪತ್ತೆಯಾಗಿವೆ. ಸತತ ಮೂರನೇ ದಿನವೂ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1,38,181ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಇನ್ನು, ಕೇಂದ್ರದ ಮಾಹಿತಿ ಪ್ರಕಾರ ಒಂದೇ ದಿನ ಮಾರಕ ಕೊರೋನಾಗೆ 147 ಮಂದಿ ಬಲಿಯಾಗಿದ್ದಾರೆ. ಇದರ ಪರಿಣಾಮ ಕೋವಿಡ್​​-19 ಸೋಂಕಿಗೆ ಬಲಿಯಾದವರ ಸಂಖ್ಯೆ 3867 ಆಗಿದೆ.

ಜಗತ್ತಿನಾದ್ಯಂತ ಇದುವರೆಗೂ ಒಟ್ಟು 54, 01,222 ಮಂದಿಗೆ ಕೋವಿಡ್-19 ಸೋಂಕು ಬಂದಿದೆ. ಜಾನ್ಸ್‌ ಹಾಪ್‌ಕಿನ್ಸ್ ಎಂಬ ಕೊರೋನಾ ವೈರಸ್ ರಿಸೋರ್ಸ್ ಸೆಂಟರ್ ಮಾಹಿತಿ ಪ್ರಕಾರ, ಸೋಂಕಿಗೆ ಜಾಗತಿಕವಾಗಿ 3,43,799 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಅಮೆರಿಕಾವೊಂದರಲ್ಲೇ 98,683 ಜನ ಅಸುನೀಗಿದ್ದಾರೆ.

ಇನ್ನು, ಅಮೆರಿಕಾದಲ್ಲೇ ಅತೀಹೆಚ್ಚು ಮಂದಿಗೆ ಅದರೆ ಒಟ್ಟು 16, 66,828 ಜನರಿಗೆ ಕೋವಿಡ್‌-19 ಪಾಸಿಟಿವ್​​ ಪತ್ತೆಯಾಗಿದೆ. ಸದ್ಯ 11, 21,231 ಮಂದಿಗೆ ಮಾತ್ರ ಸಕ್ರಿಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಬೆನ್ನಲ್ಲೀಗ ಬ್ರೆಜಿಲ್‌ ದೇಶವು ಕೋವಿಡ್-19 ಹಾಟ್​​ಸ್ಪಾಟ್​​ ಆಗಿ ಬದಲಾಗಿದೆ. ಈಗ ಮಾರಕ ಕೊರೋನಾದಿಂದ ಬಳಲುತ್ತಿರುವವರ ಸಂಖ್ಯೆ ​3,47,398ಕ್ಕೆ ತಲುಪಿದೆ. ಇದರಲ್ಲಿ 22,013 ಜನರು ಸಾವಿಗೀಡಾಗಿದ್ದಾರೆ.

ಜತೆಗೆ ಇಟಲಿ 32,735, ಸ್ಪೇನ್‌ 28,678, ಇಂಗ್ಲೆಂಡ್‌ 36,675, ಪ್ರಾನ್ಸ್​ನಲ್ಲಿ 28,332 ಮಂದಿ ಸಾವನ್ನಪ್ಪಿದ್ದಾರೆ. ಇವರ ನಂತರದ ಸಾಲಿನಲ್ಲಿ ಭಾರತ ನಿಂತಿದೆ.

Comments are closed.