ರಾಷ್ಟ್ರೀಯ

ಸಾಲದ ಮೇಲಿನ ಇಎಂಐ ಪಾವತಿ ಆ.31ರವರೆಗೆ ವಿಸ್ತರಿಸಿದ ಆರ್ ಬಿಐ; ಪಾವತಿದಾರರಿಗೆ ಸಿಹಿ ಸುದ್ದಿ

Pinterest LinkedIn Tumblr

ಮುಂಬೈ: ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಹಲವು ಕ್ರಮಗಳನ್ನು ಪ್ರಕಟಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಮತ್ತೆ ಸಾಲದ ಮೇಲೆ ಇಎಂಐ ಪಾವತಿದಾರರಿಗೆ ಕೊಂಚ ನಿಟ್ಟುಸಿರು ಬಿಡುವ ಸಿಹಿ ಸುದ್ದಿ ನೀಡಿದೆ.

ಸಾಲದ ಮೇಲಿನ ಇಎಂಐ ಪಾವತಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿದೆ. ಕಳೆದ ಮಾರ್ಚ್ ನಲ್ಲಿ ಇಎಂಐ ಪಾವತಿಯನ್ನು ಮೂರು ತಿಂಗಳಿಗೆ ಅಂದರೆ ಜೂನ್ 1ಕ್ಕೆ ವಿಸ್ತರಿಸಿದ್ದ ಆರ್ ಬಿಐ ಇದೀಗ ಆಗಸ್ಟ್ 31ರವರೆಗೆ ವಿಸ್ತರಿಸಿದೆ.

ಇದರಿಂದ ಗೃಹ ಸಾಲ ಸೇರಿದಂತೆ ವಿವಿಧ ಸಾಲ ಪಡೆದು ಇಎಂಐ ಪಾವತಿಸುವವರಿಗೆ ಕೊಂಚ ಆರ್ಥಿಕ ಹೊರೆ ಸದ್ಯದ ಮಟ್ಟಿಗೆ ಇಳಿಕೆಯಾಗಲಿದೆ.

Comments are closed.