ರಾಷ್ಟ್ರೀಯ

ಜಾಗತಿಕವಾಗಿ 50 ಲಕ್ಷ ಗಡಿ ದಾಟಿದ ಕೊರೋನಾ ಸೋಂಕು ಪೀಡಿತರ ಸಂಖ್ಯೆ

Pinterest LinkedIn Tumblr


ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾ ವೈರಸ್ ಜಗತ್ತಿನ ಜಂಘಾಬಲವನ್ನೇ ಹುದುಗಿಸಿದ್ದು, ವಿಶ್ವದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 50 ಲಕ್ಷ ಗಡಿ ದಾಟಿದೆ. ಕೊರೋನಾ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು ಈವರೆಗೆ ವಿಶ್ವದಾದ್ಯಂತ 50,00,599 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

50,00,599 ಕೊರೋನಾ ಸೋಂಕು ಪೀಡಿತರ ಪೈಕಿ ಈವರೆಗೆ 19,70,918 ಮಂದಿ ಮಾತ್ರ ಗುಣಮುಖರಾಗಿದ್ದಾರೆ. 3,25,156 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಇನ್ನೂ 27,04,525 ಜನರಲ್ಲಿ ಕೊರೋನಾ ಸೋಂಕು ಸಕ್ರಿಯವಾಗಿದೆ. 26,59,096 ಜನರಲ್ಲಿ ಸ್ವಲ್ಪ ಪ್ರಮಾಣದ ಸೋಂಕಿನ ಗುಣಲಕ್ಷಣಗಳಿದ್ದು, ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಲ್ಲದೆ 45,429 ಜನ ತೀವ್ರ ನಿಗಾ ಘಟಕದಲ್ಲಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಜಗತ್ತಿನ ಕೊರೋನಾ ಸೋಂಕು ಪೀಡಿತ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ 15,70,583 ಜನರು ಕೊರೋನಾ ಸೋಂಕು ಪೀಡಿತರಾಗಿದ್ದಾರೆ. ರಷ್ಯಾ ಎರಡನೇ ಸ್ಥಾನದಲ್ಲಿದ್ದು 3,08,705 ಮಂದಿ ಕೊರೋನಾ ಸೋಂಕು ಪೀಡಿತರಾಗಿದ್ದಾರೆ. ಸ್ಪೇನ್ ಮೂರನೇ ಸ್ಥಾನದಲ್ಲಿದ್ದು, ಅಲ್ಲಿ 2,78,803 ಜನ ಕೊರೋನಾ ಸೋಂಕು ಪೀಡಿತರಿದ್ದಾರೆ. ಭಾರತ 11ನೇ ಸ್ಥಾನದಲ್ಲಿದ್ದು ಭಾರತದಲ್ಲಿ 106,886 ಜನರು ಕೊರೋನಾ ಸೋಂಕು ಪೀಡಿತರಿದ್ದಾರೆ. ಭಾರತದ ನಂತರ ಚೀನಾ 12ನೇ ಸ್ಥಾನದಲ್ಲಿದೆ. ಅಲ್ಲಿ 82,965 ಜನರು ಕೊರೋನಾ ಸೋಂಕು ಪೀಡಿತರಿದ್ದಾರೆ.

Comments are closed.