ರಾಷ್ಟ್ರೀಯ

20 ಲಕ್ಷ ಕೋಟಿ ಪ್ಯಾಕೇಜ್ 5ನೇ ಭಾಗ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್; ಪ್ರಮುಖಾಂಶಗಳು ಇಂತಿವೆ…

Pinterest LinkedIn Tumblr

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನ 5 ನೇ ಭಾಗದ ಘೋಷಣೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೇ.17 ರಂದು ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಉದ್ಯಮ ಹಾಗೂ ಜನತೆಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಆರ್ಥಿಕ ನೆರವಿನ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಘೋಷಣೆಯ ಪ್ರಮುಖಾಂಶಗಳು ಹೀಗಿವೆ

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 3950 ಕೋಟಿ ರೂಪಾಯಿ ಹಾಗೂ ಜನ್ ಧನ್ ಖಾತೆಗಳ ಮೂಲಕ 10,025 ಕೋಟಿ ರೂಪಾಯಿ ನೀಡಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ನೇರ ವರ್ಗಾವಣೆ ಮೂಲಕ 2,000 ರೂಪಾಯಿ ನೀಡಲಾಗಿದೆ. ಈ ಮೂಲಕ ಲಾಕ್ ಡೌನ್ ಅವಧಿಯಲ್ಲಿ 8.19 ಕೋಟಿ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿದೆ.

ಬಡವರಿಗೆ ಆಹಾರ ವ್ಯವಸ್ಥೆಗಾಗಿ ಗರೀಬ್ ಕಲ್ಯಾಣ ಪ್ಯಾಕೇಜ್
ಮನ್ರೇಗಾ, ಆರೋಗ್ಯ ಸೇವೆ ಹಾಗೂ ಶಿಕ್ಷಣ, ಕೋವಿಡ್ ಸಂದರ್ಭದಲ್ಲಿ ಉದ್ಯಮ ನಡೆಸಲು ಸಹಕಾರ, ಕಂಪನಿ ಕಾಯ್ದೆಗಳ ಡಿಕ್ರಿಮಿನಲೈಸೇಶನ್, ಉದ್ಯಮ ಸರಳೀಕರಣ, ಪಿಎಸ್ ಯುಗಳು ಹಾಗೂ ನೀತಿ, ರಾಜ್ಯ ಸರ್ಕಾರಗಳು ಹಾಗೂ ಸಂಪನ್ಮೂಲಗಳು ಈ 7 ಹಂತಗಳ ಮೂಲಕ ಉದ್ಯಮ ಹಾಗೂ ಜನತೆಗೆ ಸಹಾಯ ಮಾಡಲು ಸರ್ಕಾರದ ಕ್ರಮ

ಶ್ರಮಿಕ್ ವಿಶೇಷ ರೈಲುಗಳ ಸಂಚಾರ, ಇದಕ್ಕಾಗಿ ಶೇ.85 ರಷ್ಟು ವೆಚ್ಚಗಳನ್ನು ಕೇಂದ್ರ ಸರ್ಕಾರವೇ ಭರಿಸಿದೆ.

ಆನ್ ಲೈನ್ ತರಗತಿಗಳಿಗಾಗಿ 12 ಹೆಚ್ಚುವರಿ ಚಾನಲ್ ಗಳ ಸೇರ್ಪಡೆ

ಕೊರೋನಾ ಟೆಸ್ಟಿಂಗ್ ಕಿಟ್ ಗಳಿಗಾಗಿ 550 ಕೋಟಿ ರೂಪಾಯಿ ಖರ್ಚು

ಕೊರೋನಾ ಸಾಂಕ್ರಾಮಿಕ ರೋಗ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯಗಳಿಗೆ 4113 ಕೋಟಿ ಬಿಡುಗಡೆ

300ಕ್ಕೂ ಅಧಿಕ ಪಿಪಿಇ ತಯಾರಕರಿಂದ ಈವರೆಗೆ 51 ಲಕ್ಷ ಪಿಪಿಇ ಕಿಟ್ಸ್ ಸರಬರಾಜು

ಪಿಎಂ ಇ-ವಿದ್ಯಾ ಯೋಜನೆ ತಕ್ಷಣದಿಂದಲೇ ಜಾರಿ. ಆನ್ ಲೈನ್ ತರಗತಿಗಳಿಗೆ ಹೆಚ್ಚಿನ ಒತ್ತು, 100 ವಿಶ್ವವಿದ್ಯಾನಿಲಯಗಳಿಗೆ ಆನ್ ಲೈನ್ ಕೋರ್ಸ್ ಗಳನ್ನು ಪ್ರಾರಂಭಿಸಲು ಅನುಮತಿ.

Comments are closed.