ರಾಷ್ಟ್ರೀಯ

ದೇಶದ ಕೊರೋನಾ ಹಾಟ್‌ಸ್ಪಾಟ್‌ ಮಹಾರಾಷ್ಟ್ರವಲ್ಲ, ತಮಿಳುನಾಡು

Pinterest LinkedIn Tumblr


ಚೆನ್ನೈ(ಮೇ.12): ದೇಶದಲ್ಲೀಗ ಮಾರಾಕ ಕೊರೋನಾ ವೈರಸ್​ ಮತ್ತಷ್ಟು ವ್ಯಾಪಕವಾಗಿ ಹರಡುತ್ತಿದೆ. ಇದರ ಪರಿಣಾಮ ಮಹಾರಾಷ್ಟ್ರ ಬೆನ್ನಲ್ಲೀಗ ತಮಿಳುನಾಡು ಭಾರತದ ಕೊರೋನಾ ಹಾಟ್‌ಸ್ಪಾಟ್‌ ಕೇಂದ್ರವಾಗಿ ಬದಲಾಗುತ್ತಿದೆ. ಆರಂಭದಲ್ಲಿ ತಹಬದಿಗೆ ಬಂದಿದ್ದ ಕೋವಿಡ್​​-19 ಈಗ ನಿಯಂತ್ರಣ ತಪ್ಪಿದ ಕಾರಣ ಸೋಂಕಿತರ ಸಂಖ್ಯೆ 8 ಸಾವಿರಕ್ಕೇರಿದೆ ಎಂದು ತಿಳಿದು ಬಂದಿದೆ.

ಮಂಗಳವಾರ(ನಿನ್ನೆ) ಒಂದೇ ದಿನದಲ್ಲಿ 798 ಮಂದಿಗೆ ಕೊರೋನಾ ಬಂದಿರುವುದಾಗಿ ವರದಿಯಾಗಿದೆ. ಒಂದೇ ದಿನ ಈ ಪ್ರಮಾಣದಲ್ಲಿ ಕೊರೋನಾ ಪಾಸಿಟಿವ್​​ ಪ್ರಕರಣಗಳು ದಾಖಲಾಗಿರುವುದು ತಮಿಳುನಾಡು ಜನರಲ್ಲಿ ಮತ್ತಷ್ಟು ಭೀತಿ ಹೆಚ್ಚಿಸಿದೆ. ಹೀಗಾಗಿ ಮಹಾರಾಷ್ಟ್ರದ ಮೇಲಿದ್ದ ಕೊರೋನಾ ಕರಿಛಾಯೆ ಈಗ ತಮಿಳುನಾಡಿಗೆ ಆವರಿಸಿಕೊಂಡಿದೆ.

ಕಳೆದೊಂದು ವಾರದಿಂದ ತಮಿಳುನಾಡಿನಲ್ಲಿ ಭಾರೀ ಪ್ರಮಾಣದ ಕೇಸುಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 22 ಸಾವಿರ ದಾಟಿದೆ. ಇದೀಗ ತಮಿಳುನಾಡಿನಲ್ಲೂ 8 ಸಾವಿರ ದಾಟಿದ ಕಾರಣ ದೇಶದ ಮತ್ತೊಂದು ಹಾಟ್​ಸ್ಪಾಟ್​​ ರಾಜ್ಯ ಎಂದು ಎನಿಸಿಕೊಳ್ಳುತ್ತಿದೆ.

ತಮಿಳುನಾಡಿನಲ್ಲಿ ಕಳೆದ ಎಂಟು ದಿನಗಳಲ್ಲಿ ದಾಖಲಾದ ಕೇಸುಗಳ ಅಂಕಿ ಅಂಶ

ಮೇ.3- 266 ಕೇಸ್​
ಮೇ.4- 527 ಕೇಸ್
ಮೇ.5- 508 ಕೇಸ್​
ಮೇ.6- 771 ಕೇಸ್
ಮೇ.7- 580 ಕೇಸ್​
ಮೇ.8- 600 ಕೇಸ್
ಮೇ.9- 526 ಕೇಸ್
ಮೇ.10- 669 ಕೇಸ್

ಪ್ರಸ್ತುತ ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 8002ಕ್ಕೆ ಏರಿದೆ. ಈ ಪೈಕಿ 5898 ಪ್ರಕರಣಗಳು ಮಾತ್ರ ಆ್ಯಕ್ಟೀವ್​​ ಆಗಿವೆ. 2051 ಜನ ಸಂಪೂರ್ಣ ಕಂಡು ಡಿಸ್ಚಾರ್ಜ್​​ ಆಗಿದ್ದಾರೆ. ಇದುವರೆಗೂ ಈ ಸೋಂಕಿಗೆ 53 ಮಂದಿ ಬಲಿಯಾಗಿದ್ದಾರೆ.

Comments are closed.