ರಾಷ್ಟ್ರೀಯ

ಕೇರಳದಲ್ಲಿ ಇಂದು ಇಬ್ಬರಿಗೆ ಸೋಂಕು, 505 ಸೋಂಕಿತರ ಪೈಕಿ 485 ಮಂದಿ ಗುಣಮುಖ

Pinterest LinkedIn Tumblr
Chief Minister of Kerala Pinarayi Vijayan interview in New Delhi, Express Photo by Tashi Tobgyal New Delhi 250717

ನವದೆಹಲಿ(ಮೇ.09): ಕಟ್ಟುನಿಟ್ಟಿನ ಲಾಕ್​​ಡೌನ್​​​ ನಡುವೆಯೂ ದೇಶಾದ್ಯಂತ ತೀವ್ರಗತಿಯಲ್ಲಿ ಹರಡುತ್ತಿರುವ ಮಾರಕ ಕೊರೋನಾ ವೈರಸ್​​ ಸೋಂಕು ಕೇರಳದಲ್ಲಿ ಮಾತ್ರ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಇದಕ್ಕೆ ಸಾಕ್ಷಿಯೇ ಇತ್ತೀಚೆಗೆ ತುಂಬಾ ಕಡಿಮೆ ಕೋವಿಡ್​​-19 ಕೇಸುಗಳು ಪತ್ತೆಯಾಗುತ್ತಿವೆಯೆಂದು. ಇಂದು ಕೂಡ ಕೇವಲ ಇಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದ್ದು, ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಇದುವರೆಗೂ ಕೇರಳದಲ್ಲಿ ಒಟ್ಟು 505 ಜನರಿಗೆ ಕೊರೋನಾ ಬಂದಿದೆ. ಈ ಪೈಕಿ 485 ಮಂದಿ ಗುಣಮುಖರಾಗಿದ್ದಾರೆ. ಸದ್ಯ 17 ಆ್ಯಕ್ಟೀವ್​​​​​ ಕೇಸುಗಳ ಮಾತ್ರ ಉಳಿದಿವೆ. ಹೀಗಾಗಿ ಕೇರಳದಲ್ಲಿ ಬಹುತೇಕ ಲಾಕ್​​ಡೌನ್​​ ಸಡಿಲಗೊಳಿಸಿ ಎಲ್ಲಾ ಸೇವೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಅತೀ ಹೆಚ್ಚಿನ ಕೊರೊನಾ ವೈರಸ್‌ ಕಾಣಿಸಿಕೊಂಡ ರಾಜ್ಯಗಳಲ್ಲಿ ಆರಂಭದಲ್ಲಿ ಮೊದಲ ಸ್ಥಾನದಲ್ಲಿದ್ದ ಕೇರಳ ನಂತರ ದೀರ್ಘ ಅವಧಿಗೆ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿತ್ತು. ಇದೀಗ ರಾಜ್ಯ 15ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಕೋವಿಡ್‌-19 ಪಾಸಿಟಿವ್‌ ಸಂಖ್ಯೆ ಏರಿಕೆಯಾಗದಂತೆ ಕೇರಳ ತಡೆ ಹಿಡಿದಿದೆ. ಈ ಯಶಸ್ಸಿನ ಸುದ್ದಿಯೀಗ ಅಮೆರಿಕಾ ಸೇರಿ ವಿದೇಶಗಳಿಗೂ ತಲುಪಿದೆ.

ದೇಶದಲ್ಲಿ ಕೊರೊನಾ ಪೀಡಿತರ ಅಂಕಿ ಸಂಖ್ಯೆಗಳ ಲೆಕ್ಕದಲ್ಲಿ ಕೇರಳ ಸಾಕಷ್ಟು ಸುಧಾರಿಸಿದೆ. ರಾಜ್ಯದಲ್ಲಿ 505 ಸೋಂಕಿತರು ಇದ್ದು, ಇವರಲ್ಲಿ ಸಾವಿಗೀಡಾದವರ ಸಂಖ್ಯೆ ಕೇವಲ ಮೂರು. ಅಂದರೆ ಸಾವಿನ ಪ್ರಮಾಣ ಜಸ್ಟ್‌ 0.8. ಇನ್ನು ರಾಜ್ಯದ ಶೇಕಡಾ 90ರಷ್ಟು ರೋಗಿಗಳು ಇಲ್ಲಿಯವರೆಗೆ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಹಾಗಾಗಿಯೇ 505 ಕೇಸುಗಳ ಪೈಕಿ 17 ಆ್ಯಕ್ಟೀವ್​​ ಕೇಸುಗಳಿವೆ.

Comments are closed.