ರಾಷ್ಟ್ರೀಯ

ಮಧ್ಯಪ್ರದೇಶದಲ್ಲಿ 31 ಮಂದಿ ಪೊಲೀಸರಿಗೆ ಕೊರೋನಾ ಸೋಂಕು

Pinterest LinkedIn Tumblr


ಭೋಪಾಲ್(ಮೇ.07): ದೇಶಾದ್ಯಂತ ಕೊರೋನಾ ವೈರಸ್​​ ಹಾವಳಿ ಜೋರಾಗಿದೆ. ಮಹಾರಾಷ್ಟ್ರದ ಬೆನ್ನಲ್ಲೀಗ ಮಧ್ಯಪ್ರದೇಶದಲ್ಲೂ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿನ ಪ್ರಮುಖ ನಗರಗಳಾದ ಇಂದೋರ್, ಬೋಪಾಲ್‌ ಕೊರೊನಾ ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದೆ. ದುರಂತದ ವಿಚಾರವೆಂದರೇ ವೈದ್ಯರು, ಪತ್ರಕರ್ತರಂತೆಯೇ ಕೊರೋನಾ ವಿರುದ್ಧದ ಹೋರಾಟದ ಕರ್ತವ್ಯನಿರತರಾಗಿದ್ದ 31 ಪೊಲೀಸರಿಗೆ ಸೋಂಕು ತಗುಲಿದೆ.

ಇನ್ನು, ಇಂದೋರ್​​ ಪಶ್ಚಿಮ ವಿಭಾಗದ ಎಸ್​ಪಿ ಮಹಮ್ಮದ್ ಯೂಸೂಫ್ ಖುರೇಶಿ ಸೇರಿದಂತೆ 31 ಜನ ಪೊಲೀಸರಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ 31 ಪೊಲೀಸರ ಪೈಕಿ 22 ಜನರಿಗೆ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ 8 ಮಂದಿ ಸೋಂಕಿನಿಂದ ತೀವ್ರ ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ. ಜತೆಗೆ ಓರ್ವ ಕಾನ್ಸ್​ಟೇಬಲ್​​ ಬಲಿಯಾಗಿದ್ದಾರೆ.

ಸದ್ಯ ಮಧ್ಯಪ್ರದೇಶದಲ್ಲಿ ಇಲ್ಲಿಯತನಕ 3138 ಜನರಿಗೆ ಕೊವಿಡ್-19 ಬಂದಿದೆ. ಜತೆಗೆ 185 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಜತೆಗೆ 1099 ಜನ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕಾರಣ ಸದ್ಯ 1854 ಆ್ಯಕ್ಟೀವ್​​ ಕೇಸುಗಳಿವೆ.

ದೇಶದಲ್ಲಿ 52,952 ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಇನ್ನು ಮಹಾಮಾರಿಗೆ 1,783 ಮಂದಿ ಬಲಿಯಾಗಿದ್ದಾರೆ. 15,266 ಮಂದಿ ಗುಣಮುಖರಾಗಿದ್ದು ಡಿಸ್ಚಾರ್ಜ್ ಆಗಿದ್ದಾರೆ.

Comments are closed.