ರಾಷ್ಟ್ರೀಯ

ದೇಶದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ 50,000 ದಾಖಲು

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಇಂದು 50,000 ದಾಟಿದೆ. ಇದರಲ್ಲಿ 10,000 ಪ್ರಕರಣಗಳು ಮೂರು ದಿನಗಳ ಅವಧಿಯಲ್ಲಿ ಪತ್ತೆ ಮಾಡಲಾಗಿದೆ. 24 ಗಂಟೆಗಳ ಅವಧಿಯಲ್ಲಿ 3900 ಪ್ರಕರಣ ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಮಂಗಳವಾರ ಬೆಳಿಗ್ಗೆ ವರದಿ ಮಾಡಿದೆ.

ಒಟ್ಟು ಪ್ರಕರಣಗಳ ಸಂಖ್ಯೆ ಈಗ 50,545 ಆಗಿದ್ದು, ಅವುಗಳಲ್ಲಿ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದಿದ್ದು. 14,000 ಕ್ಕೂ ಹೆಚ್ಚು ಜನರು ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ ಮತ್ತು 1,650 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಮಹಾರಾಷ್ಟ್ರದಲ್ಲಿ ಪ್ರಸ್ತುತ 16,758 ಪ್ರಕರಣಗಳಿದ್ದು, ಈ ಪೈಕಿ ಇಂದು1,233 ಪ್ರಕರಣಗಳು ವರದಿಯಾಗಿವೆ.ರೋಗಿಗಳ ಒಂದು ಭಾಗ ಮುಂಬೈನಲ್ಲಿವೆ.ಅಲ್ಲಿ ಇದುವರೆಗೆ 10,714 ಪ್ರಕರಣಗಳು ವರದಿಯಾಗಿವೆ.ಇನ್ನೊಂದೆಡೆಗೆ ಗುಜರಾತ್‌ನಲ್ಲಿ ಎರಡನೇ ಸ್ಥಾನದಲ್ಲಿದೆ, 6200 ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ, ನಂತರದ ಸ್ಥಾನ ದೆಹಲಿಯಾಗಿದೆ,ಅಲ್ಲಿ 5,000 ಕ್ಕೂ ಹೆಚ್ಚು ಪ್ರಕರಣಗಳಿವೆ. ದೆಹಲಿಯ ನಂತರ ತಮಿಳುನಾಡು, ಈಗ 4,000 ಗಡಿ ದಾಟಿದೆ.

ಡಿಸೆಂಬರ್‌ನಲ್ಲಿ ಕೊರೋನಾವೈರಸ್ ಚೀನಾದ ವುಹಾನ್‌ನಲ್ಲಿ ಕಾಣಿಸಿಕೊಂಡು. ಜನವರಿ 30 ರಂದು ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು, ಆ ರೋಗಿಯು ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದನು. ಮಾರ್ಚ್ನಲ್ಲಿ ಈ ಸಂಖ್ಯೆಗಳು ಹೆಚ್ಚಾಗಲು ಪ್ರಾರಂಭಿಸಿದವು, ನಂತರ ಮಾರ್ಚ್ 25 ರಂದು ಕೇಂದ್ರವು ದೇಶಾದ್ಯಂತ ಲಾಕ್ಡೌನ್ ಘೋಷಿಸುವ ಕೆಲವೇ ದಿನಗಳ ಮೊದಲು ರಾಜ್ಯಗಳು ನಿರ್ಬಂಧಗಳನ್ನು ಘೋಷಿಸಲು ಮುಂದಾದವು.

ಈಗಾಗಲೇ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿದ್ದಲ್ಲದೆ, ವಲಸೆ ಕಾರ್ಮಿಕರು ಈಗ ಆಹಾರವಿಲ್ಲದೆ ಊರಿಗೆ ಹೋಗಲು ಪರದಾಡುತ್ತಿದ್ದಾರೆ.

Comments are closed.