ರಾಷ್ಟ್ರೀಯ

ಕೇರಳದಲ್ಲಿ 2 ದಿನಗಳಿಂದ ಹೊಸ ಪಾಸಿಟಿವ್‌ ಪ್ರಕರಣಗಳಿಲ್ಲ

Pinterest LinkedIn Tumblr


ತಿರುವನಂತಪುರಂ: ಕಳೆದ ಎರಡು ದಿನಗಳಿಂದ ಕೇರಳದಲ್ಲಿ ಕೊರೊನಾ ವೈರಸ್‌ ಹೊಸ ಪ್ರಕರಣಗಳು ದಾಖಲಾಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. 61 ಮಂದಿ ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿದ್ದು, ಪ್ರಸ್ತುತ 34 ಮಂದಿ ಚಿಕಿತ್ಸೆಯಲ್ಲಿದ್ದಾರೆ.

“ಒಟ್ಟು 21,352 ಮಂದಿಯನ್ನು ಅವರವರ ಮನೆಗಳಲ್ಲಿ ವೀಕ್ಷಣೆಯಲ್ಲಿ ಇಡಲಾಗಿದೆ. ಇನ್ನುಳಿಂದ 372 ಮಂದಿಯನ್ನು ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಅವಲೋಕನದಲ್ಲಿ ಇರಿಸಲಾಗಿದೆ,” ಎಂದು ವಿಜಯನ್‌ ಮಾಹಿತಿ ನಿಡಿದ್ದಾರೆ. ಪ್ರಸ್ತುತ ಕೇರಳದಲ್ಲಿ 84 ಹಾಟ್‌ಸ್ಪಾಟ್‌ಗಳಿವೆ.

ಲಾಕ್‌ಡೌನ್‌ ಅನ್ನು ಕೇಂದ್ರ ಸರ್ಕಾರ ಮೇ.17ರವರೆಗೆ ಮುಂದುವರಿಸಲಾಗಿದೆ. ಆದರೆ, ಕೇರಳ ರಾಜ್ಯದಲ್ಲಿ ಹಸಿರು ಹಾಗೂ ಆರೆಂಜ್‌ ವಲಯಗಳಲ್ಲಿ ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಅಲಪ್ಪುಝಾ, ಎರ್ನಾಕುಲಂ ಹಾಗೀ ತ್ರಿಸ್ಸೂರ್‌ ಹಸಿರು ಜಿಲ್ಲೆಗಳಾಗಿವೆ ಹಾಗೂ ತಿರುವನಂತಪುರಂ, ಕೊಲ್ಲಂ ಪಥನಮ್‌ತಿಟ್ಟ, ಮಲಪುರಂ. ಕೊಝಿಕೊಡ್‌, ಪಲಕಡ್‌, ಇಡುಕ್ಕಿ, ಕಾಸರಗೂಡು ಹಾಗೂ ವಾಯ್‌ನಾಡ್‌ ಆರೆಂಜ್‌ ಜಿಲ್ಲೆಯಗಳಾಗಿವೆ. ಕಣ್ಣೂರು ಮತ್ತು ಕೊಟ್ಟಾಯಂ ಕೆಂಪು ವಲಯದ ಜಿಲ್ಲೆಗಳಾಗಿವೆ.

1,66,263 ಮಂದಿ ಇತರ ರಾಜ್ಯಗಳಿಂದ ಹಿಂತಿರುಗಲು ನೋಂದಾಯಿಸಿಕೊಂಡಿದ್ದಾರೆ ಹಾಗೂ 515 ಕೇರಳ ನಿವಾಸಿಗಳು ಸೋಮವಾರ ರಾಜ್ಯಕ್ಕೆ ಮರಳಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

“ಇಂದು ಮಧ್ಯಾಹ್ನ 515 ಮಂದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇದುವರೆಗೂ 28,272 ಮಂದಿ ಪಾಸ್‌ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಹಾಗೂ ಈಗಾಗಲೇ 5,470 ಮಂದಿಗೆ ಪಾಸ್‌ ವಿತರಿಸಲಾಗಿದೆ,” ಎಂದು ಸುದ್ದಿಗೋಷ್ಠಿಯಲ್ಲಿ ವಿಜಯನ್‌ ಮಾಹಿತಿ ನೀಡಿದ್ದಾರೆ.

ಕರ್ನಾಟಕದಿಂದ ಕೇರಳಕ್ಕೆ ಮರಳಲು 55,188 ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ತಮಿಳುನಾಡಿನಿಂದ 50,863 ಮತ್ತು ಮಹಾರಾಷ್ಟ್ರದಿಂದ 22,515 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ,” ಎಂದು ಅವರು ಹೇಳಿದ್ದಾರೆ.

Comments are closed.