ರಾಷ್ಟ್ರೀಯ

ದಿಲ್ಲಿ: ಒಂದೇ ಕಟ್ಟಡದ 41 ಮಂದಿಗೆ ಕೊರೊನಾ ವೈರಸ್ ಸೋಂಕು!

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಈ ಮಧ್ಯೆ ದಿಲ್ಲಿಯಲ್ಲಿ ಶನಿವಾರದಂದು ಒಂದೇ ಕಟ್ಟಡದ 41 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣ ಕಂಡುಬಂದಿದೆ.

ನೈಋತ್ಯ ದಿಲ್ಲಿಯಲ್ಲಿ ಕಪಶೇರಾ ಪ್ರದೇದಲ್ಲಿರುವ ಕಟ್ಟಡವೊಂದರಲ್ಲಿ ವಾಸಿಸುತ್ತಿರುವ 41 ಜನರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 18ರಂದು ಈ ಪ್ರದೇಶದಲ್ಲಿ ಕಟ್ಟಡವೊಂದರಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಬಳಿಕ ಇದುವರೆಗೆ 41 ಮಂದಿಗೆ ಹರಡಿದೆ.

10 ಸಹಸ್ರ ಗಡಿ ದಾಟಿದ ಕೋವಿಡ್ ಗುಣಮುಖರ ಸಂಖ್ಯೆ

ಈ ನಿರ್ದಿಷ್ಟ ಕಟ್ಟದಲ್ಲಿ ಹೆಚ್ಚಿನ ಜನಸಂಖ್ಯೆಯ ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವು ಏಪ್ರಿಲ್ 19ರಂದು ಕಟ್ಟಡವನ್ನು ಮುಚ್ಚುಗಡೆಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿತ್ತು.

ಕನಿಷ್ಠ ಮೂರು ಪ್ರಕರಣ ದಾಖಲಾದಾಗ ಕಟ್ಟಡದಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿತ್ತು. ಬಳಿಕ ಕಟ್ಟಡದಲ್ಲಿರುವ ಎಲ್ಲ ನಿವಾಸಿಗಳ ಸ್ಯಾಂಪಲ್‌ಗಳನ್ನು ನೋಯ್ಡಾದ ರಾಷ್ಟ್ರೀಯ ಜೈವಿಕ ಸಂಸ್ಥೆಗೆ (ಎನ್‌ಐಬಿ) ಸಂಸ್ಥೆಗೆ ಕಳುಹಿಸಿಕೊಡಲಾಯಿತು.

ಕಟ್ಟಡದಿಂದ ಸಂಗ್ರಹಿಸಲಾದ ಒಟ್ಟು ಮಾದರಿಗಳಲ್ಲಿ ಕೆಲವು ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಕಂಡುಬಂದಿದೆ. ಇದರೊಂದಿಗೆ ಕಟ್ಟಡವೊಂದರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಂದ ಹಾಗೆ ದಿಲ್ಲಿಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 2,738ಕ್ಕೆ ಏರಿಕೆಯಾಗಿದೆ. ಈ ಪೈಕಿ 1167 ಮಂದಿ ಗುಣಮುಖರಾಗಿದ್ದಾರೆ. ಹಾಗೆಯೇ 61 ಮಂದಿ ಸಾವಿಗೆ ಶರಣಾಗಿದ್ದಾರೆ.

Comments are closed.