ರಾಷ್ಟ್ರೀಯ

ದೇಶದಲ್ಲಿ ಕಳೆದ 24 ತಾಸಿನಲ್ಲಿ 1718 ಕೊರೊನಾ ವೈರಸ್ ಸೋಂಕಿತರ ಹೊಸ ಪ್ರಕರಣ

Pinterest LinkedIn Tumblr


ಹೊಸದಿಲ್ಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ತಾಜಾ ವರದಿಗಳ ಪ್ರಕಾರ ಗುರುವಾರ ಸಂಜೆಯ ವೇಳೆಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,050ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿಯನ್ನು ನೀಡಿದ್ದಾರೆ.

ಅದೇ ಹೊತ್ತಿಗೆ ಕಳೆದ 24 ತಾಸಿನ ಅವಧಿಯಲ್ಲಿ ದೇಶದಲ್ಲಿ ಹೊಸತಾಗಿ 1718 ಕೋವಿಡ್ ಸೋಂಕು ಪ್ರಕರಣಗಳು ದಾಖಲಾಗಿದೆ.

ಈ ನಡುವೆ ಅಲ್ಪ ಸಮಾಧಾಕರ ಸುದ್ದಿಯಲ್ಲಿ 8,324 ಮಂದಿ ಸಂಪೂರ್ಣವಾಗಿ ಚೇತರಿಕೆಯನ್ನು ಹೊಂದಿದ್ದಾರೆ.

ಇನ್ನು ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗ ಬಾಧಿಸಿರುವ ಪೈಕಿ 23,652 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ಭಾರತ ಕೊರೊನಾಲಜಿ:
ಒಟ್ಟು ಸೋಂಕಿತರು: 33,050
ಸಕ್ರಿಯ ಪ್ರಕರಣಗಳು: 23,651
ಗುಣಮುಖ: 8,324

ಏತನ್ಮಧ್ಯೆ ಕಳೆದ 24 ತಾಸಿನೊಳಗೆ 630 ಮಂದಿ ಸಂಪೂರ್ಣವಾಗಿ ಚೇತರಿಕೆಯನ್ನು ಪಡೆದಿದ್ದಾರೆ.

ಒಟ್ಟಾರೆಯಾಗಿ ಇತರೆ ದೇಶಗಳನ್ನು ಹೋಲಿಸಿದಾಗ ಭಾರತ ಪರಿಣಾಮಕಾರಿಯೆನಿಸಿಕೊಂಡಿದ್ದು, ಕೋವಿಡ್ ಹರಡುವುದನ್ನು ಒಂದು ಹಂತದವರೆಗೆ ತಡೆಯಲಾಗಿದೆ.

ಭಾರತದಲ್ಲಿ ಎರಡನೇ ಹಂತದ ಕೊರೊನಾ ವೈರಸ್ ಲಾಕ್‌ಡೌನ್ ಅವಧಿಯು ಮೇ 3ರಂದು ಕೊನೆಗೊಳ್ಳಲಿದೆ.

Comments are closed.