ರಾಷ್ಟ್ರೀಯ

ಕೊಲ್ಲಿ ರಾಷ್ಟ್ರಗಳ ಸೋಶಿಯಲ್‌ ಮೀಡಿಯಾದಲ್ಲಿ ಭುಗಿಲೆದ್ದಿರುವ ಇಸ್ಲಾಮೋಫೋಬಿಯಾ; ವಿವಾದಕ್ಕೆ ತೆರೆಯೆಳೆಯಲು ಮುಂದಾಗಿರುವ ಪ್ರಧಾನಿ

Pinterest LinkedIn Tumblr

ನವದೆಹಲಿ: ಕೊಲ್ಲಿ ರಾಷ್ಟ್ರಗಳ ಸೋಶಿಯಲ್‌ ಮೀಡಿಯಾದಲ್ಲಿ ಭುಗಿಲೆದ್ದಿರುವ ಇಸ್ಲಾಂ ಭೀತಿ(ಇಸ್ಲಾಮೋಫೋಬಿಯಾ)ಗೆ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈ ಶಂಕರ್‌ ಈ ರಾಷ್ಟ್ರಗಳ ಅಧಿಕಾರಿಗಳೊಂದಿಗೆ ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.

ಕೊರೊನಾಗೆ ಇಸ್ಲಾಂಫೋಬಿಯಾವನ್ನ ತಳುಕಿ ಹಾಕಿರುವಂತಹ ಫೇಕ್‌ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದು ಕೊಲ್ಲಿ ರಾಷ್ಟ್ರಗಳು ಹಾಗೂ ಭಾರತದ ನಡುವಿನ ಸಂಬಂಧಕ್ಕೆ ಹೊಡೆತ ನೀಡುವ ಸಾಧ್ಯತೆ ಇದೆ ಎನ್ನುವುದನ್ನ ಅರಿತು ಎಚ್ಚೆತ್ತುಕೊಂಡಿರುವ ಸಚಿವ ಜೈ ಶಂಕರ್‌ ಮುನ್ನೆಚ್ಚರಿಕೆ ಕ್ರಮವಾಗಿ ರಾಯಬಾರಿಗಳು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ ಕೂಡ ಈ ರಾಷ್ಟ್ರಗಳ ಪ್ರಮುಖರೊಂದಿಗೆ ಫೋನ್‌ ಮೂಲಕ ಮಾತುಕತೆ ನಡೆಸಿದ್ದಾರೆ.

ಒಮನ್‌, ಯುಎಇ, ಕುವೈತ್‌ ರಾಷ್ಟ್ರಗಳಲ್ಲಿ ಕೊರೊನಾವನ್ನ ಇಸ್ಲಾಂ ಧರ್ಮಕ್ಕೆ ತಳುಕುಹಾಕಿರುವ ಪೋಸ್ಟ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಮುಖವಾಗಿ ಈ ದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೆ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇತ್ತು. ಈ ಹಿನ್ನೆಲೆ ಪ್ರಧಾನಿ ಹಾಗೂ ಜೈ ಶಂಕರ್‌ ಅಲ್ಲಿನ ಅಧಿಕಾರಿಗಳು ಹಾಗೂ ಪ್ರಮುಖರಲ್ಲಿ ಸಮಾಲೋಚನೆ ನಡೆಸಿ ಫೇಕ್‌ ನ್ಯೂಸ್‌ಗಳಿಂದಾಗಿ ಇಂತಹ ಸಮಸ್ಯೆ ಸೃಷ್ಟಿಯಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಇದಾವುದು ನಿಜವಲ್ಲ ಕೆಲವೊಂದು ಫೇಕ್‌ನ್ಯೂಸ್‌ಗಳು ಸಮಾಜದ ಸ್ವಾಸ್ಥ್ಯ ಕೆಡಿಸಲು ನಡೆಸುತ್ತಿರುವ ಹುನ್ನಾರ ಎನ್ನುವುದನ್ನ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೇ ರಂಜಾನ್‌ಗೆ ಭಾರತದಿಂದ ಎಲ್ಲಾ ರೀತಿಯ ಸಹಕಾರ ನೀಡೋದಾಗಿ ಸಚಿವರು ತಿಳಿಸಿದ್ದಾರೆ. ಅಲ್ಲದೆ ಭಾರತದಿಂದ ನಡೆಯೋ ರಫ್ತಿನಲ್ಲಿ ಯಾವುದೇ ಬದಲಾವಣೆಗಳು ಆಗೋದಿಲ್ಲ ಎಲ್ಲಾ ರೀತಿಯ ಸಹಕಾರ ನೀಡಲಿದ್ದೇವೆ ಎಂದು ಸಚಿವರು ಭರವಸೆ ನೀಡಿದ್ದಾರೆ.

Comments are closed.