ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನ ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋದ ಶೇ.9.99ರಷ್ಟು ಷೇರುಗಳನ್ನು ಫೇಸ್‌ಬುಕ್ ಖರೀದಿಸಿದೆ. ಈ ಮೂಲಕ ಸಾಮಾಜಿಕ ಮಾಧ್ಯಮವೊಂದು ವೇಗವಾಗಿ ಬೆಳೆಯುತ್ತಿರುವ ಬೃಹತ್ ಟೆಲಿಕಾಂ ಮಾರುಕಟ್ಟೆಗೆ ದೃಢ ಹೆಜ್ಜೆ ಇರಿಸಿದಂತಾಗಿದೆ. ಅಲ್ಲದೆ, ತೈಲ ಉದ್ಯಮದಿಂದ ದೂರಸಂಪರ್ಕ ಉದ್ಯಮಕ್ಕೆ ಬಂದಿದ್ದ ರಿಲಯನ್ಸ್ ಸಮೂಹ ಸಸ್ಥೆಗೂ ಕೂಡ ಸಾಲದ ಹೊರೆಯನ್ನು ಕಡಿಮೆ ಮಾಡಲಿದೆ.
ಹಾಗಿದ್ದರೆ, ವಿಶ್ವದ ಬೃಹತ್ ಸಾಮಾಜಿಕ ಮಾಧ್ಯಮ ಒಂದು ಟೆಲಿಕಾಂ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿರುವ ಹಿಂದಿನ ಗುಟ್ಟೇನು? ಜಿಯೋ ಷೇರುಗಳನ್ನು ಖರೀಡಿ ಮಾಡುವುದರಿಂದ ಫೇಸ್ಬುಕ್‌ಗೆ ಆಗುವ ಲಾಭಗಳೇನು?
ಯಾವುದೇ ಕಾರ್ಪೊರೇಟ್ ಕಂಪನಿ ಲಾಭವಿಲ್ಲದೆ ಒಂದು ರೂಪಾಯಿಯನ್ನೂ ಹೂಡಿಕೆ ಮಾಡುವುದಿಲ್ಲ. ಫೆಸ್ಬುಕ್ ಕೂಡ ದೂರದೃಷ್ಟಿ ಹೊಂದಿದ್ದೇ ಹೂಡಿಕೆಗೆ ಮುಂದಾಗಿದೆ.
ರಿಲಯನ್ಸ್ ಜಿಯೋದಲ್ಲಿ ಷೇರು ಖರೀದಿಸುವುದರಿಂದ ಫೇಸ್‌ಬುಕ್ ಏನು ಗಳಿಸುತ್ತದೆ ಎಂಬ ಕುರಿತ ವಿವರ ಇಲ್ಲಿದೆ.
ಫೇಸ್‌ಬುಕ್ ಈಗ ರಿಲಯನ್ಸ್ ಜಿಯೋದ ಅತಿದೊಡ್ಡ ಷೇರುದಾರನಾಗಿ ಮಾರ್ಪಟ್ಟಿದೆ.
ಜಿಯೋದ 38.8 ಕೋಟಿ ಗ್ರಾಹಕರೊಂದಿಗೆ, ಫೇಸ್ಬುಕ್ ಹೆಚ್ಚಿನ ಗ್ರಾಹಕರ ಪ್ರವೇಶ ಪಡೆಯಲಿದೆ.
ಭಾರತದಾದ್ಯಂತ 6 ಕೊಟಿಗೂ ಹೆಚ್ಚು ಅತಿ ಸಣ್ಣ, ಸಣ್ಣ ಉದ್ಯಮಗಳಿಗೆ ಡಿಜಿಟಲ್ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಲಿದೆ.
ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಜನರು ಮತ್ತು ವ್ಯವಹಾರಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡಲಿದೆ.
ಉದಾಹರಣೆಗೆ, ವಾಟ್ಸಾಪ್‌ನ ಜತಗೆ ಜಿಯೋ ಮಾರ್ಟ್ ಅನ್ನು ಒಟ್ಟುಗೂಡಿಸುವ ಮೂಲಕ, ಜನರು ಫೋನ್ ಮೂಲಕವೇ ಡಿಜಿಟಲ್ ವ್ಯವಹಾರ ನಡೆಸಲು ಹಾಗೂ ಖರೀದಿಯಲ್ಲಿ ತೊಡಗಲು ಅವಕಾಶ ಮಾಡಿಕೊಡಲಿದೆ ಫೇಸ್‌ಬುಕ್ ಹೇಳಿದೆ.
ಒಟ್ಟಾರೆ ಜಿಯೋದೊಂದಿಗೆ ಫೇಸ್ಬುಕ್ ಕೈಜೋಡಿಸಿರುವುದು ಭಾರತಕ್ಕೆ ಹೊಸ ಅವಕಾಶಗಳು ತೆರೆಯಲಿವೆ. ಭಾರತದ ಆರ್ಥಿಕ ಬೆಳವಣಿಗೆ ಮತ್ತು ಅದರ ಜನರ ಸಮೃದ್ಧಿಯನ್ನು ಉತ್ತೇಜಿಸುವತ್ತ ಗಮನ ಹರಿಸಲಾಗುವುದು ಎಂದು ಸ್ವತಃ ಫೇಸ್ಬುಕ್ ಹೇಳಿಕೊಂಡಿದೆ.
ಫೇಸ್‌ಬುಕ್ ಭಾರತದ ಕಂಪನಿಯೊಂದರಲ್ಲಿ ಇಷ್ಟು ಪ್ರಮಾಣದ ಷೇರುಗಳನ್ನು ಖರೀದಿಸುತ್ತಿರುವುದು ಇದೇ ಮೊದಲೇನಲ್ಲ. ಸಾಮಾಜಿಕ ವಾಣಿಜ್ಯ ಕಂಪನಿಯಾದ ಮೀಶೋ ಹಾಗೂ ಆನ್‌ಲೈನ್ ಶಿಕ್ಷಣ ಸಂಸ್ಥೆ ಅನ್‌ಅಕಾಡೆಮಿ ಸಂಸ್ಥೆಗಳಲ್ಲೂ ಈ ಹಿಂದೆ ಹೂಡಿಕೆ ಮಾಡಿದೆ.
“ಈ ಹೂಡಿಕೆಯು ಭಾರತದ ಬಗೆಗೆ ಇರುವ ನಮ್ಮ ಬದ್ಧತೆಯನ್ನು ಒತ್ತಿಹೇಳುತ್ತದೆ. ಅಲ್ಲದೆ, ದೇಶದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಡಿಸಿರುವ ಕ್ರಾಂತಿಕಾರಕ ಬದಲಾವಣೆಗಣೆಗೆ ನಮ್ಮ ಬೆಂಬಲವಿದೆ” ಎಂದು ಫೇಸ್ಬುಕ್ ಹೇಳಿಕೊಂಡಿದೆ.
Comments are closed.