ರಾಷ್ಟ್ರೀಯ

ಶೇ.17ರಷ್ಟು ಕೊರೋನಾ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ: ಕೇಂದ್ರ ಸರಕಾರ

Pinterest LinkedIn Tumblr


ನವದೆಹಲಿ: ಸೋಮವಾರ ಡಿಸ್ಚಾರ್ಚ್ ಆದ 705 ಕೊವಿಡ್-19 ರೋಗಿಗಳು ಸೇರಿದಂತೆ ದೇಶದಲ್ಲಿ ಇದುವರೆಗೆ 3,252 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಭಾರತದಲ್ಲಿ ಕೊರೋನಾ ವೈರಸ್ ರೋಗಿಗಳ ಚೇತರಿಕೆಯ ಪ್ರಮಾಣ ಶೇ. 17.48 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು, ದೇಶದಲ್ಲಿ ಇದುವರೆಗೆ 3,252 ಜನರನ್ನು ಗುಣಪಡಿಸಲಾಗಿದೆ ಮತ್ತು ಅವರಲ್ಲಿ 705 ಮಂದಿ ಏಪ್ರಿಲ್ 20 ರಂದು ಚೇತರಿಸಿಕೊಂಡಿದ್ದಾರೆ ಎಂದರು.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,336 ಹೊಸ ಪ್ರಕರಣಗಳನ್ನು ದಾಖಲಾಗಿವೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 18,601ಕ್ಕೆ ತಲುಪಿದೆ ಎಂದು ಅವರು ಹೇಳಿದರು.

ಕಳೆದ 14 ದಿನಗಳಲ್ಲಿ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 61 ಹೆಚ್ಚುವರಿ ಜಿಲ್ಲೆಗಳು ಯಾವುದೇ ಹೊಸ ಪ್ರಕರಣಗಳನ್ನು ವರದಿಯಾಗಿಲ್ಲ ಎಂದು ಅಗರವಾಲ್ ಅವರು ತಿಳಿಸಿದ್ದಾರೆ.

Comments are closed.