ರಾಷ್ಟ್ರೀಯ

ರಮಝಾನ್‌ ಸಂದರ್ಭ ಲಾಕ್‌ಡೌನ್ ಪಾಲಿಸುವಂತೆ ಮುಸ್ಲಿಮರಿಗೆ ‌ಜಮಿಯತ್‌ ಉಲೇಮಾ ಸಲಹೆ

Pinterest LinkedIn Tumblr


ಹೊಸದಿಲ್ಲಿ: ರಂಜಾನ್‌ ವೇಳೆ ಕೊರೊನಾ ವೈರಸ್‌ ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಮುಸ್ಲಿಮ್‌ ಸಮುದಾಯದವರಿಗೆ ಜಮಿಯತ್‌ ಉಲೇಮಾ ಇ ಹಿಂದ್‌ ಸಲಹೆ ನೀಡಿದೆ.

ಈ ವಾರಾಂತ್ಯದಿಂದ ರಂಜಾನ್‌ ಮಾಸಾಚರಣೆ ಆರಂಭಗೊಳ್ಳಲಿದೆ. “ಮನೆಯಲ್ಲಿ ಇದ್ದುಕೊಂಡೇ ರಂಜಾನ್‌ ಆಚರಣೆಯನ್ನು ನೆರವೇರಿಸಬೇಕು. ತೀರ ಅಗತ್ಯ ಕೆಲಸಗಳಿದ್ದಲ್ಲಿ ಮಾತ್ರ ಮನೆಯಿಂದ ಹೊರ ಬನ್ನಿ. ಇಲ್ಲದಿದ್ದರೆ ಅಂತಹ ತೊಂದರೆ ತೆಗೆದುಕೊಳ್ಳಬೇಡಿ. ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣಕ್ಕೆ ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ,” ಎಂದು ಜಮಿಯತ್‌ ಉಲೇಮಾ ಪ್ರಧಾನ ಕಾರ್ಯದರ್ಶಿ ಮಹಮೂದ್‌ ಮದನಿ ಸೋಮವಾರ ಮನವಿ ಮಾಡಿದ್ದಾರೆ.

ಕೊರೊನಾ ಕಾರಣ ದೇಶ ಕ್ಲಿಷ್ಟ ಸನ್ನಿವೇಶ ಎದುರಿಸುತ್ತಿದೆ. ಈ ಸಂದರ್ಭ ಅನೇಕರಿಗೆ ಆಹಾರದ ಕೊರತೆ ಎದುರಾಗಿದೆ. ಅಂಥ ಹಸಿದವರ ಬಗ್ಗೆ ರಂಜಾನ್‌ ವೇಳೆ ಕನಿಕರ ತೋರುವ ಅಗತ್ಯ ಇದೆ. ಹಸಿದವರಿಗೆ ಅನ್ನ ನೀಡುವ ಮೂಲಕ ಆಚರಣೆಯನ್ನು ಅರ್ಥಪೂರ್ಣಗೊಳಿಸಬಹುದಾಗಿದೆ ಎಂದು ಅವರು ಸಮುದಾಯದವರಿಗೆ ತಿಳಿಸಿದ್ದಾರೆ.

Comments are closed.