ರಾಷ್ಟ್ರೀಯ

ಕೊರೋನಾ: ‘ಮನೆಯೇ ಹೊಸ ಕಚೇರಿ’- ಮೋದಿ

Pinterest LinkedIn Tumblr


ನವದೆಹಲಿ: ವೃತ್ತಿಪರ ಜೀವನದ ಬಾಹ್ಯರೇಖೆಗಳನ್ನು ಕೋವಿಡ್-19 ಗಮನಾರ್ಹವಾಗಿ ಬದಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಿಂಕ್‌ಡಿನ್ ಕುರಿತು ಭಾನುವಾರ ದೇಶವಾಸಿಗಳೊಂದಿಗೆ ಆಲೋಚನೆಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ‘ಈ ದಿನಗಳಲ್ಲಿ ಮನೆಯೇ ಹೊಸ ಕಚೇರಿ. ಇಂಟರ್ನೆಟ್, ಹೊಸ ಸಭಾ ಭವನವಾಗಿದೆ. ಸದ್ಯಕ್ಕೆ, ಕಚೇರಿಗಳಲ್ಲಿ ಸಹೋದ್ಯೋಗಿಗಳ ಜೊತೆಗಿನ ವಿರಾಮಗಳು ಇತಿಹಾಸ.’ ಎಂದು ಹೇಳಿದರು.

‘ಕೊವಿಡ್‍-19 ಅನೇಕ ಅಡೆತಡೆಗಳನ್ನು ತಂದೊಡ್ಡಿದೆ. ಕೊರೊನಾವೈರಸ್ ವೃತ್ತಿಪರ ಜೀವನದ ಬಾಹ್ಯರೇಖೆಗಳನ್ನು ಗಮನಾರ್ಹವಾಗಿ ಬದಲಾಯಿಸಿದೆ.ಈ ಬದಲಾವಣೆಗಳಿಗೆ ನಾನು ಸಹ ಹೊಂದಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಬದಲಾವಣೆಗಳಿಗೆ ತಾವು ಸಹ ಹೊಂದಿಕೊಳ್ಳುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು. ಸಚಿವರ ಸಭೆಗಳಾಗಲಿ, ಅಧಿಕಾರಿಗಳು ಇಲ್ಲವೇ ವಿಶ್ವ ನಾಯಕರ ಸಭೆಗಳಾಗಲಿ ಹೆಚ್ಚಿನ ಸಭೆಗಳು ಈಗ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿವೆ. ಈ ಬದಲಾವಣೆಗಳಿಗೆ ನಾನು ಸಹ ಹೊಂದಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಹೇಳಿದರು.

ಹೆಚ್ಚಿನ ಸಭೆಗಳು, ಸಚಿವರ ಸಹೋದ್ಯೋಗಿಗಳು, ಅಧಿಕಾರಿಗಳು ಮತ್ತು ವಿಶ್ವ ನಾಯಕರೊಂದಿಗೆ ಇರಲಿ, ಈಗ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎಂದು ಅವರು ಹೇಳಿದರು. ಕೆಲಸ ನಿರ್ವಹಿಸುವ ಸ್ಥಳದಲ್ಲಿ ‘ಡಿಜಿಟಲ್ ಮೊದಲು’ ಎಂಬಂತಾಗಿದೆ. ಇಷ್ಟೇ ಅಲ್ಲದೆ, ತಂತ್ರಜ್ಞಾನದ ಪರಿಣಾಮ ಬಡಜನರ ಜೀವನದ ಮೇಲೆಯೂ ಬೀರುತ್ತಿದೆ. ಅಧಿಕಾರಶಾಹಿ ಇಲ್ಲವಾಗಿಸಲು, ಮಧ್ಯವರ್ಥಿಗಳನ್ನು ಇಲ್ಲವಾಗಿಸಲು ಮತ್ತು ಕಲ್ಯಾಣ ಯೋಜನೆಗಳು ವೇಗ ಪಡೆಯಲು ತಂತ್ರಜ್ಞಾನ ನೆರವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೋನಾಗೆ ಧರ್ಮ, ಜಾತಿ, ಭಾಷೆ, ವರ್ಗವೆಂಬ ಭೇದವಿಲ್ಲ: ಪ್ರಧಾನಿ ನರೇಂದ್ರ ಮೋದಿ
ಕೊರೋನಾ ವೈರಾಣು ಸೋಂಕಿನ ಬಿಕ್ಕಟ್ಟು ಎಲ್ಲರನ್ನೂ ಸಮನಾಗಿ ಬಾಧಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಯಾವುದೇ ಧರ್ಮ, ಬಣ್ಣ, ಜಾತಿ, ಭಾಷೆ, ವರ್ಗಗಳು ಅಥವಾ ಗಡಿಗಳನ್ನು ಕೊರೊನಾ ನೋಡುವುದಿಲ್ಲ. ಆದರೆ ಕೊರೋನಾ ಬಗ್ಗು ಬಡಿಯಲು ನಾವು ಅಧುನಿಕ ತಂತ್ರಜ್ಙಾನವನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಒತ್ತಿ ಹೇಳಿದ್ದಾರೆ.

‘ಏಕತೆ ಮತ್ತು ಪರಸ್ಪರ ಸಹೋದರತ್ವದಿಂದ ಇರಬೇಕು. ನಾವು ಇದರಲ್ಲಿ ಒಗ್ಗಟ್ಟಾಗಿದ್ದೇವೆ’ ಎಂದವರು ಹೇಳಿದ್ದಾರೆ. ‘ಇತಿಹಾಸದಲ್ಲಿ ಕೆಲವು ಸಂದರ್ಭಗಳಂತೆ ಈಗಿರಲು ಸಾಧ್ಯವಿಲ್ಲ. ದೇಶಗಳು ಅಥವಾ ಸಮಾಜಗಳು ಪರಸ್ಪರ ವಿರುದ್ಧ ಇದ್ದ ಹಾಗೆ ಇರಲಾಗದು. ನಾವು ಈಗ ಸಾಮಾನ್ಯ ಸಮಸ್ಯೆಯನ್ನು ಒಗ್ಗಟ್ಟಾಗಿ ಎದುರಿಸುತ್ತಿದ್ದೇವೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Comments are closed.