ರಾಷ್ಟ್ರೀಯ

ಕೊರೋನಾ ವೈರಸ್​ ಧರ್ಮ, ಜಾತಿ, ಭಾಷೆ, ಬಣ್ಣ, ಗಡಿ ಯಾವುದನ್ನು ನೋಡುವುದಿಲ್ಲ: ಮೋದಿ

Pinterest LinkedIn Tumblr


ನವದೆಹಲಿ(ಏ.19): ಕೊರೋನಾ ವೈರಸ್​ ಬರುವ ಮುನ್ನ ನಿನ್ನ ಧರ್ಮ, ಜಾತಿ, ಭಾಷೆ, ಬಣ್ಣ, ಗಡಿ ಯಾವುದನ್ನು ನೋಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಈ ಸಂಬಂಧ ಟ್ವೀಟ್​​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೋವಿಡ್​​-19ಗೆ ಧರ್ಮ ಮತ್ತು ಜಾತಿ ಗೊತ್ತಿಲ್ಲ. ಹಾಗಾಗಿ ಜನ ಶಾಂತಿ, ಐಕ್ಯತೆ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮಾರ್ಚ್ 10ನೇ ತಾರೀಕಿನಂದು ನಡೆದ ನಿಜಾಮುದ್ದೀನ್ ಧಾರ್ಮಿಕ ಸಭೆ ದೇಶಾದ್ಯಂತ ಆತಂಕದ ಅಲೆಯನ್ನು ಸೃಷ್ಟಿಸಿದೆ. ಇಲ್ಲಿನ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ತಬ್ಲಿಫಿ ಜಮಾತ್ ಧಾರ್ಮಿಕ ಸಭೆ ನಡೆದಿತ್ತು. ಈ ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಸೇರಿದಂತೆ ಸುಮಾರು 2,000ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ತೆಲಂಗಾಣದ 6 ಜನರು ಸೇರಿದಂತೆ ಹತ್ತಾರು ಜನ ಸಾವನ್ನಪ್ಪಿದ್ದರು. ಇಷ್ಟು ಮಂದಿ ಕೊರೋನಾದಿಂದಲೇ ಮೃತಪಟ್ಟರು ಎಂಬುದು ಆತಂಕದ ಸಂಗತಿಯಾಗಿತ್ತು. ಕೊರೋನಾ ತೀವ್ರಗೊಳ್ಳುತ್ತಿದ್ದಂತೆಯೇ ಇಡೀ ದೇಶ ಲೌಕ್​​ಡೌನ್​​ ಮಾಡಿ ಆದೇಶ ಹೊರಡಿಸಿದ್ದ ಹೊತ್ತಲ್ಲೇ ಹೀಗೆ ಧಾರ್ಮಿಕ ಸಭೆಯನ್ನು ಆಯೋಜಿಸಿ ಈ ಪ್ರಮಾಣದಲ್ಲಿ ಆತಂಕ ಸೃಷ್ಟಿಸಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೋನಾ ಹರಡಲು ಮುಸ್ಲಿಮರೇ ಕಾರಣ ಎಂದು ಕೆಲವರು ಆರೋಪಿಸಿದ್ದರು. ಈ ಬೆನ್ನಲ್ಲೇ ಈಗ ಪ್ರಧಾನಿ ನರೇಂದ್ರ ಮೋದಿ ಹೀಗೆ ಟ್ವೀಟ್​ ಮಾಡಿದ್ದಾರೆ.

ಒಂದೆಡೆ ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಸಭೆ ನಡೆದಿರುವುದು ಪ್ರಶ್ನಾರ್ಹವಾದರೂ, ಇದೇ ನೆಪದಲ್ಲಿ ಹಲವರು ಇಡೀ ಮುಸ್ಲಿಂ ಸಮುದಾಯವನ್ನು ನಿಂದಿಸಲಾಗುತ್ತಿದೆ. ಯಾವುದೋ ಒಂದು ಸಂಘಟನೆ ಮಾಡಿದ ತಪ್ಪಿಗೆ ಇಡೀ ಮುಸ್ಲಿಂ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಸರ್ಕಾರದ ಅನುಮತಿ ಪಡೆದೇ ಈ ಧಾರ್ಮಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂಬುದನ್ನು ಮರೆ ಮಾಚಲಾಗುತ್ತಿದೆ ಎಂದು ಸಮುದಾಯದ ಒಂದಷ್ಟು ಜನರ ಅಭಿಪ್ರಾಯವಾದರೆ, ಇನ್ನೊಂದೆಡೆ ಈ ಧಾರ್ಮಿಕ ಸಭೆ ಹಮ್ಮಿಕೊಳ್ಳುವ ಅವಶ್ಯಕತೆ ಏನಿತ್ತು? ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಕೊರೋನಾ ಪೀಡಿತರನ್ನು ಕಾಪಾಡಬಹುದು ಎಂದು ಹೇಳಲಾಗುತ್ತಿದೆ. ಆದರೀಗ ಅವರಿಂದ ಹರಡುವ ಸಾಂಕ್ರಾಮಿಕ ರೋಗ ಕೊರೋನಾದಿಂದ ದೇಶವನ್ನು ಬಚಾವ್ ಮಾಡುವುದು​ ಹೇಗೆ ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚೆಗೆ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಮುಸ್ಲಿಂ ಸಮುದಾಯದ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗಿಯಾಗಿದ್ದ ಮಂದಿಗೆ ಕೊರೋನಾ ಇದೆ. ಇದರಿಂದ ಇಡೀ ದೇಶಕ್ಕೆ ಕೊರೋನಾ ವೈರಸ್​ ಸೋಂಕು ಹರಡಲಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಜಿಹಾದ್​ ಎಂಬ ಹ್ಯಾಶ್​ ಟ್ಯಾಗ್​​ ಟ್ರೆಂಡ್​ ಆಗಿತ್ತು. ಈ ಹ್ಯಾಶ್​​ ಟ್ಯಾಗ್​​ ಬಳಸಿ ಹಲವರು ಒಂದೇ ಸಮುದಾಯವನ್ನು ಟಾರ್ಗೆಟ್​​ ಮಾಡುತ್ತಿದ್ದರು.

ಸಿಎಎ ಮತ್ತು ಎನ್​​​ಆರ್​​ಸಿ ವಿರುದ್ಧದ ಶಾಹೀನ್​​ ಬಾಗ್​​ ಹೋರಾಟಕ್ಕೂ ಧಾರ್ಮಿಕ ಬಣ್ಣ ಬಳಿಯಲಾಯ್ತು. ಈಗ ಅದೇ ರೀತಿಯಲ್ಲೇ ತಬ್ಲಿಘಿ ಜಮಾತ್ ಧಾರ್ಮಿಕ ಸಭೆಗೂ ಹೀಗೆ ಬಣ್ಣ ಬಳಿಯಲಾಗುತ್ತಿದೆ ಎಂದು ಶಾಹೀನ್​​ ಬಾಗ್​​​​ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Comments are closed.