ರಾಷ್ಟ್ರೀಯ

ಭಾರತೀಯ ಸೇನೆಯ 8 ಮಂದಿಗೆ ಕೊರೋನಾ ವೈರಸ್

Pinterest LinkedIn Tumblr


ಹೊಸದಿಲ್ಲಿ: ಭಾರತೀಯ ಸೇನಾಪಡೆಯ ಎಂಟು ಮಂದಿ ಸಿಬ್ಬಂದಿ ಇಲ್ಲಿಯ ತನಕ ಕೋವಿಡ್-19 ಸೋಂಕಿಗೆ ತುತ್ತಾಗಿದ್ದಾರೆಂದು ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರಾವಣೆ ಮಾಹಿತಿ ನೀಡಿದ್ದಾರೆ.

ಸೋಂಕಿತರಲ್ಲಿ ಇಬ್ಬರು ವೈದ್ಯರು ಹಾಗೂ ಒಬ್ಬರು ದಾದಿಯ ಸಹಾಯಕಿಯಾಗಿದ್ದಾರೆ. ಮಿಕ್ಕಂತೆ ನಾಲ್ಕು ಮಂದಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಲಡಾಖ್‍ ನಿಂದ ವರದಿಯಾದ ಒಂದು ಪ್ರಕರಣದಲ್ಲಿ ಸಿಬ್ಬಂದಿ ಸಂಪೂರ್ಣ ಗುಣಮುಖರಾಗಿ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ನರಾವಣೆ ಹೇಳಿದ್ದಾರೆ.

ಭಾರತೀಯ ನೌಕಾಪಡೆ ಹಾಗೂ ವಾಯುದಳದಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಆದರೆ ವಾಯುಪಡೆ ಮೂರು ಸಿಬ್ಬಂದಿಯನ್ನು ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂದಿದ್ದಾರೆ.

ಲಾಕ್ ಡೌನ್ ಸಂಕಟ: ಜನರಿಗೆ ಸಹಜ ಜೀವನಕ್ಕೆ ಮರಳುವ ತವಕ

ಈ ವರೆಗೆ ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಾರದ ನಮ್ಮ ಸಿಬ್ಬಂದಿಗಳನ್ನು ಮತ್ತೆ ಘಟಕಗಳಿಗೆ ಸ್ಥಳಾಂತರಿಸಲಾಗುತ್ತಿದೆ, ಅದಕ್ಕಾಗಿ ಈಗಾಗಲೇ ಎರಡು ವಿಶೇಷ ರೈಲುಗಳನ್ನು ಮಾಡಲಾಗಿದ್ದು, ಬೆಂಗಳೂರಿನಿಂದ ಜಮ್ಮು ಮತ್ತು ಬೆಂಗಳೂರಿನಿಂದ ಗುವಾಹಟಿಗೆ ತೆರಳಿದೆ ಎಂದು ಸೇನಾ ಮುಖ್ಯಸ್ಥರು ತಿಳಿಸಿದ್ದಾರೆ.

Comments are closed.