ರಾಷ್ಟ್ರೀಯ

ದೇಶಾದ್ಯಂತ ಕೊರೊನಾ ವೈರಸ್ ನ 1007 ಹೊಸ ಪ್ರಕರಣಗಳು ಪತ್ತೆ, 23 ಜನ ಸಾವು: ಆರೋಗ್ಯ ಇಲಾಖೆ

Pinterest LinkedIn Tumblr


ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ಸೊಂಕಿನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ 13387ಕ್ಕೆ ತಲುಪಿದೆ. ಈ ಮಹಾಮಾರಿಗೆ ಇರುವರೆಗೆ ಸುಮಾರು 437 ಜನ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ಸೋಂಕಿತರ ಸುಮಾರು 1007 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 24ಗಂಟೆಗಳಲ್ಲಿ ಸುಮಾರು 23 ಜನ ಈ ಕಾಯಿಲೆಗೆ ಮರಣ ಹೊಂದಿದ್ದಾರೆ. ಇವೆಲ್ಲವುದರ ನಡುವೆ ಸಂತಸದ ಸುದ್ದಿ ಎಂದರೆ ಏಪ್ರಿಲ್ 1ರ ಬಳಿಕ ಕೊರೊನಾ ವೈರಸ್ ಸೋಂಕು ಏರಿಕೆಯಾಗುವ ದರ ಶೇ.40 ರಷ್ಟು ಕುಸಿದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಸಂಯುಕ್ತ ಸಚಿವ ಲವ್ ಅಗರವಾಲ್ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಗರವಾಲ್, ” ಇದುವರೆಗೆ ಈ ಮಾರಕ ಕಾಯಿಲೆಯಿಂದ ಸುಮಾರು 1749 ಗುಣಮುಖರಾಗಿದ್ದಾರೆ. ಜೊತೆಗೆ ರಾಪಿಡ್ ಟೆಸ್ಟ್ ಗಾಗಿ ರಾಜ್ಯಗಳಿಗೆ ಸುಮಾರು ಐದು ಲಕ್ಷ ಕಿಟ್ ಗಳನ್ನು ಕಳುಹಿಸಲಾಗಿದೆ. ಏಪ್ರಿಲ್ 1ರಿಂದ ಇದುವರೆಗೆ ಕೋರೋನಾ ಸೋಂಕು ಪಸರಿಸುವ ದರದಲ್ಲಿ ಶೇ.40ರಷ್ಟು ಇಳಿಕೆಯಾಗಿದೆ. ಈಗಾಗಲೇ ದೇಶದಲ್ಲಿ ರಾಪಿಡ್ ಟೆಸ್ಟಿಂಗ್ ಕಿಟ್ ತಯಾರಿರುವ ಕಾರ್ಯ ಭರದಿಂದ ಸಾಗಿದೆ. ಈ ರಾಪಿಡ್ ಟೆಸ್ಟಿಂಗ್ ಕಿಟ್ ಗಳು ಕೇವಲ 30 ನಿಮಿಷಗಳಲ್ಲಿ ವರದಿಯನ್ನು ನೀಡಲಿವೆ. ಮೇ ತಿಂಗಳ ಅಂತ್ಯದವರೆಗೆ ಸುಮಾರು 10 ಲಕ್ಷ ಸ್ವದೇಶಿ ರಾಪಿಡ್ ಟೆಸ್ಟಿಂಗ್ ಕಿಟ್ ಗಳನ್ನು ತಯಾರಿಸುವ ಗುರಿ ಹೊಂದಲಾಗಿದ್ದು, ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ಕೊರೊನಾ ವೈರಸ್ ಸೋಂಕು ಹರಡುವಿಕ ತಡೆಯುವ ನಿಟ್ಟಿನಲ್ಲಿ ಉತ್ತಮ ಪ್ರದರ್ಶನ ತೋರಿದೆ” ಎಂದು ಅವರು ಹೇಳಿದ್ದಾರೆ.

“ಲಾಕ್ ಡೌನ್ ಗೂ ಮೂರು ದಿನ ಮೊದಲು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಎರಡುಪಟ್ಟು ಹೆಚ್ಚಳವಾಗಿತ್ತು. ಏಪ್ರಿಲ್ 1ರ ಬಳಿಕ ಈ ಗ್ರೋಥ್ ಫ್ಯಾಕ್ಟರ್ ನಲ್ಲಿ ಶೇ.40ರಷ್ಟು ಇಳಿಕೆ ಕಂಡುಬಂದಿದೆ. ಈ ಸೋಂಕಿನಿಂದ ಬಳಲುತ್ತಿರುವ ರೋಗಿಗಳಲ್ಲಿ ಶೇ.80 ರಷ್ಟು ಜನರು ಚೇತರಿಸಿಕೊಂಡಿದ್ದು, ಕೇವಲ ಶೇ.20ರಷ್ಟು ಜನರು ಬಲಿಯಾಗಿದ್ದಾರೆ. ಇಂದು ಕೊರೊನಾ ವೈರಸ್ ಲಾಕ್ ಡೌನ್ ಕುರಿತು ಸಚಿವರ ತಂಡದ ಚರ್ಚೆ ನಡೆಸಿದ್ದು, ಇದರಲ್ಲಿ ಡೈಗ್ನೋಸಿಸ್, ವ್ಯಾಕ್ಸಿನ್ ಇತ್ಯಾದಿಗಳ ಕುರಿತು ಚರ್ಚೆ ನಡೆಸಲಾಗಿದೆ. ಸರ್ಕಾರದ ಪಾಲಿಗೆ ಪ್ರತಿಯೊಂದು ಸಾವು ಚಿಂತೆಯ ವಿಷಯವಾಗಿದೆ, ಆದರೆ ನಾವು ಇತರೆ ದೇಶಗಳ ತುಲನೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದು, ಇನ್ನೂ ಉತ್ತಮ ಕಾರ್ಯ ನಿರ್ವಹಿಸಲು ನಮ್ಮ ಪ್ರಯತ್ನಗಳನ್ನು ಮುಂದುವರೆಸಲಿದ್ದೇವೆ” ಎಂದು ಅಗರವಾಲ್ ಹೇಳಿದ್ದಾರೆ.

Comments are closed.