ರಾಷ್ಟ್ರೀಯ

ಕೊರೋನಾ ವೈರಸ್​ಗೆ ಜಗತ್ತಿನಲ್ಲಿ 1.36 ಲಕ್ಷ ಮಂದಿ ಸಾವು; 21 ಲಕ್ಷ ಜನರಿಗೆ ಸೋಂಕು

Pinterest LinkedIn Tumblr


ನವದೆಹಲಿ: ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಾರಕ ಕೊರೋನಾ ಸೋಂಕು ಮಾನವ ಕುಲದ ಅಸ್ತಿತ್ವದ ಮೇಲೆ ಕರಿಛಾಯೆಯಾಗಿ ಕಾಡಲಾರಂಭಿಸಿದೆ. ದಿನದಿಂದ ದಿನಕ್ಕೆ ಹೆಮ್ಮಾರಿ ಸೋಂಕು ಜಾಗತಿಕವಾಗಿ ಹಬ್ಬುತ್ತಿದ್ದು, ಈವರೆಗೂ ನೂರಾರು ದೇಶಗಳಲ್ಲಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ.

ವಿಶ್ವದ ವಿವಿಧೆಡೆ ಒಟ್ಟು 21 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೃತರ ಸಂಂಖ್ಯೆ 1.36 ಲಕ್ಷಕ್ಕೆ ಏರಿಕೆಯಾಗಿದೆ. ಗುರುವಾರ ಸಂಜೆ 6.30ರವರೆಗಿನ ಮಾಹಿತಿ ಪ್ರಕಾರ ಕೋವಿಡ್-19 ಪಿಡಿಗಿಗೆ ಅಮೆರಿಕದಲ್ಲಿ 28,554 ಮಂದಿ ವಿಶ್ವದಲ್ಲೇ ಅತಿಹೆಚ್ಚು ಜನ ಬಲಿಯಾಗಿದ್ದಾರೆ. ಇಟಲಿಯಲ್ಲಿ 21,645 ಮತ್ತು ಸ್ಪೇನ್​ನಲ್ಲಿ 19,130 ಜನರು ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 6,64,417 ಹೆಚ್ಚಾಗಿದೆ. ನಂತರದ ಸ್ಥಾನದಲ್ಲಿ ಸ್ಪೇನ್ ಇದ್ದು1,82,816 ಮಂದಿಯಲ್ಲಿ ಸೋಂಕಿದೆ. ಜರ್ಮನಿಯಲ್ಲಿ 1,34,753 ಹಾಗೂ ಫ್ರಾನ್ಸ್​ನಲ್ಲಿ 1,47,863 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಬ್ರಿಟನ್​ನಲ್ಲಿ 98,476 ಮಂದಿ ವೈರಸ್​ಗೆ ಈಡಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಬೆಲ್ಜಿಯಂನಲ್ಲಿ 417 ಮಂದಿ ಸತ್ತಿದ್ದಾರೆ. ಸ್ಪೇನ್​ನಲ್ಲಿ 318, ಮೆಕ್ಸಿಕೋದಲ್ಲಿ 43, ರಷ್ಯಾದಲ್ಲಿ 34 ಹಾಗೂ ಪಾಕಿಸ್ತಾನದಲ್ಲಿ 13 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲೂ ಕೊರೋನಾ ವೈರಸ್​ ಆರ್ಭಟ ಮುಂದುವರಿದಿದೆ. ಮಾರಕ ಕೋವಿಡ್​​-19 ಸೋಂಕಿಗೆ ಇದುವರೆಗೂ ದೇಶದಲ್ಲಿ 420 ಮಂದಿ ಬಲಿಯಾಗಿದ್ದಾರೆ. ಹಾಗೆಯೇ ಸುಮಾರು 12,759 ಮಂದಿ ಕೊರೋನಾ ಸೋಂಕಿತರಾಗಿದ್ದಾರೆ. ಈ ಪೈಕಿ 1,514 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

Comments are closed.