ಕರೋನಾ ವೈರಸ್ ಬಗ್ಗೆ ಹೊಸ ವಿಷಯವೊಂದು ಬಹಿರಂಗಗೊಂಡಿದೆ. ಈ ಮಾರಕ ವೈರಸ್ ಅತಿ ಹೆಚ್ಚಿನ ತಾಪಮಾನದಲ್ಲಿಯೂ ಕೂಡ ದೀರ್ಘಕಾಲ ಸಕ್ರಿಯವಾಗಿ ಉಳಿಯುತ್ತದೆ ಎಂದು ಹೊಸ ಸಂಶೋಚನೆಯೊಂದು ಬಹಿರಂಗಪಡಿಸಿದೆ. ಫ್ರಾನ್ಸ್‌ನ ವಿಜ್ಞಾನಿಗಳ ತಂಡ ಈ ಕುರಿತು ಸಂಶೋಧನೆಯೊಂದನ್ನು ನಡೆಸಿದ್ದಾರೆ. ಕರೋನಾ ವೈರಸ್ ಹೆಚ್ಚಿನ ತಾಪಮಾನದಲ್ಲಿ ನಿಷ್ಕ್ರಿಯಗೊಳ್ಳುತ್ತದೆ ಈ ಹಿಂದೆ ಹೇಳಲಾಗಿತ್ತು.
ದಕ್ಷಿಣ ಫ್ರಾನ್ಸ್‌ನ ಐಕ್ಸ್ ಮಾರ್ಸೆಲ್ಲೆ ವಿಶ್ವವಿದ್ಯಾಲಯದ ಪ್ರೊಫೆಸರ್ ರೆಮಿ ಶೆರೆಲ್, ತಮ್ಮ ಸಹೋದ್ಯೋಗಿಗಳ ಜೊತೆ ಸೇರಿಕೊಂಡು ಈ ಕುರಿತಾದ ಭ್ರಮೆಯನ್ನು ಹೊಡೆದು ಹಾಕಿದ್ದಾರೆ. ರೆಮಿ ಈ ಪರೀಕ್ಷೆಯಲ್ಲಿ ಕರೋನಾ ವೈರಸ್ ಅನ್ನು 60°C ತಾಪಮಾನದ ಮೇಲೆ ಪರೀಕ್ಷೆ ನಡೆಸಿದ್ದಾರೆ.
60°C ತಾಪಮಾನದಲ್ಲಿ ಸುಮಾರು ಒಂದು ಗಂಟೆ ಈ ವೈರಸ್ ನ ಇರುವಿಕೆಯನ್ನು ಪರೀಕ್ಷಿಸಿದ ನಂತರ, ರೆಮಿ ಮತ್ತು ಅವರ ತಂಡವು ವೈರಸ್‌ನ ಕೆಲ ಪ್ರಭೇದಗಳು ಸೋಂಕನ್ನು ಹರಡಲು ಇನ್ನೂ ಸಮರ್ಥವಾಘಿವೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಅಂದರೆ, ಇಂತಹ ಹೆಚ್ಚಿನ ತಾಪಮಾನದಲ್ಲಿಯೂ ಕೂಡ ವೈರಸ್ ನಿಷ್ಕ್ರೀಯವಾಗುವುದು ಅಸಾಧ್ಯ ಎಂಬುದನ್ನು ಅವರು ಹೇಳಿದ್ದಾರೆ.
ಹೀಗಾಗಿ ಬಿಸಿ ವಾತಾವರಣ ಇರುವ ಭಾರತದಂತಹ ದೇಶದಲಿ ಕೊರೊನಾ ವೈರಸ್ ಪ್ರಭಾವ ಕಡಿಮೆ ಇರುತ್ತದೆ ಭರವಸೆ ವ್ಯಕ್ತಪಡಿಸಿರುವವರ ನಂಬಿಕೆಗೆ ಈ ಸಂಶೋಧನೆ ಭಾರಿ ಪೆಟ್ಟು ನೀಡಿದಂತಾಗಿದೆ. ಭಾರತದ ಕೆಲವೇ ಕೆಲವು ಭಾಗಗಳಲ್ಲಿ ಗರಿಷ್ಟ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಗಡಿ ದಾಟುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
ಈ ಸಂಶೋಧನೆಗಾಗಿ ಆಫ್ರಿಕಾದಲ್ಲಿ ಕಂಡುಬರುವ ನಿರ್ದಿಷ್ಟ ಜಾತಿಯ ಕೋತಿಗಳ ಮೂತ್ರಪಿಂಡ ಕೋಶಗಳಿಗೆ ವಿಜ್ಞಾನಿಗಳ ತಂಡವು ಕೊರೊನಾ ಸೋಂಕು ತಗುಲಿಸಿದೆ. ಬರ್ಲಿನ್ ನಲ್ಲಿ ಐಸೋಲೆಶನ್ ನಲ್ಲಿ ಇಡಲಾಗಿದ್ದ ಓರ್ವ ವ್ಯಕ್ತಿಯ ದೇಹದಿಂದ ಕೊರೊನಾ ವೈರಸ್ ಸೋಂಕನ್ನು ಪಡೆದು ಈ ಜೀವಕೋಶಗಳಿಗೆ ಸೋಂಕು ತಗುಳುವಂತೆ ಮಾಡಲಾಗಿದೆ.
ಬಳಿಕ ಈ ವೈರಸ್ ಅನ್ನು ಎರಡು ವಿಭಿನ್ನ ಟ್ಯೂಬ್ ಗಳಿಗೆ ಭರ್ತಿ ಮಾಡಿ ಕೊಳಕು ಮತ್ತು ಸ್ವಚ್ಛ ಎಂಬ ಎರಡು ವಿಭಿನ್ನ ಪರಿಸರಗಳಲ್ಲಿ ಪರೀಕ್ಷಿಸಲಾಗಿದೆ. ಆದರೆ, ಅಂತಿಮವಾಗಿ ಹೊರಬಂದ ಫಲಿತಾಂಶಗಳನ್ನು ಕಂಡು ಅಲ್ಲಿದ್ದ ವಿಜ್ಞಾನಿಗಳೇ ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ, ಸ್ವಚ್ಛ ವಾತಾವರಣದಲ್ಲಿ ಬೆಳೆದ ವೈರಸ್ ಹೈ ಟೆಂಪರೇಚರ್ ನಲ್ಲಿ ನಿಷ್ಕ್ರೀಯಗೊಂಡಿದೆ. ಆದರೆ, ಕೊಳಕು ವಾತಾವರಣದಲ್ಲಿ ಬೆಳೆದ ವೈರಸ್ ಹೈ ಟೆಂಪ್ರೆಚರ್ ನಲ್ಲಿಯೂ ಕೂಡ ಸೋಂಕು ಪಸರಿಸುವ ಸಾಮರ್ಥ್ಯ ಉಳಿಸಿಕೊಂಡಿದೆ.
ಅತಿ ಹೆಚ್ಚಿನ ಉಷ್ಮಾಂಶದಲ್ಲಿ ಈ ವೈರಸ್ ಸ್ವಲ್ಪ ಶಿಥಿಲಗೊಂಡರೂ ಕೂಡ ಅದರಲ್ಲಿ ಸೋಂಕು ಪಸರಿಸುವ ಸಾಮರ್ಥ್ಯ ಮಾತ್ರ ಕುಗ್ಗಿರಲಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಓವರ್ ಹೀಟಿಂಗ್ ಮೂಲಕ ಈ ವೈರಸ್ ಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂಬುದನ್ನು ಫ್ರೆಂಚ್ ವಿಜ್ಞಾನಿಗಳು ಕೂಡ ಒಪ್ಪಿಕೊಂಡಿದ್ದಾರೆ. ಉದಾಹರಣೆಗೆ ಈ ವೈರಸ್ ನ ವಿಭಿನ್ನ ಪ್ರಭೇದಗಳನ್ನು 15 ನಿಮಿಷಗಳ ಕಾಲ 92 ಡಿಗ್ರಿ ಸೆಲ್ಸಿಯಸ್ ಗುರಿಪಡಿಸಿದರೆ ಇದು ಸಂಪೂರ್ಣ ಸಿಷ್ಕ್ರೀಯವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸದ್ಯ ವಿಶ್ವಾದ್ಯಂತ ಕೊರೊನಾ ವೈರಸ್ ನ ಸುಮಾರು 19 ಲಕ್ಷಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣಗಳಲ್ಲಿ ಸುಮಾರು 1.25 ಲಕ್ಷ ಜನರು ಈ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.
Comments are closed.