ರಾಷ್ಟ್ರೀಯ

ಲಾಕ್​ಡೌನ್​ ಮೇ 3ರ ವರೆಗೆ ವಿಸ್ತರಣೆಯಾಗಿದ್ದು ಏಕೆ ಗೊತ್ತಾ?

Pinterest LinkedIn Tumblr


ನವದೆಹಲಿ (ಏಪ್ರಿಲ್ 14); ದೇಶದಲ್ಲಿ ಕೊರೋನಾ ವೈರಸ್‌ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ಮೊದಲ ಹಂತದ ಲಾಕ್‌ಡೌನ್ ಇಂದಿಗೆ ಮುಕ್ತಾಯವಾಗಿದೆ. ಇನ್ನೂ ಲೆಕ್ಕಾಚಾರದಂತೆ ಎರಡನೇ ಹಂತದ ಲಾಕ್‌ಡೌನ್‌ ಏಪ್ರಿಲ್ 30ಕ್ಕೆ ಕೊನೆಯಾಗಬೇಕಾಗಿತ್ತು. ಆದರೆ, ಅದು ಮೇ 03ರ ವರೆಗೆ ವಿಸ್ತರಣೆಯಾಗಿದ್ದು ಏಕೆ ಗೊತ್ತಾ?

ಅಸಲಿಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ಶನಿವಾರ ಎಲ್ಲಾ ರಾಜ್ಯದ ಸಿಎಂಗಳ ಜೊತೆಗೆ ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚೆ ನಡೆಸಿದ್ದರು. ಈ ವೇಳೆ ಎಲ್ಲಾ ಮುಖ್ಯಮಂತ್ರಿಗಳು ಏಪ್ರಿಲ್‌ 30ರ ವರೆಗೆ ಲಾಕ್‌ಡೌನ್‌ ಮುಂದುವರೆಸುವ ಒಮ್ಮತದ ಅಭಿಪ್ರಾಯ ಮುಂದಿಟ್ಟಿದ್ದರು. ಈ ಮಾಹಿತಿ ಹೊರ ಬೀಳುತ್ತಿದ್ದಂತೆ ಸಾರ್ವಜನಿಕರೂ ಸಹ ಏಪ್ರಿಲ್‌ 30ರ ವರೆಗೆ ಲಾಕ್‌ಡೌನ್ ಅನುಭವಿಸಲು ಮಾನಸಿಕವಾಗಿ ಸಿದ್ದರಾಗಿದ್ದರು. ಆದರೆ, ಈ ಅವಧಿ ಇದೀಗ ಮೇ 03ಕ್ಕೆ ವಿಸ್ತರಣೆಯಾಗಿದೆ.

ಕಾರಣ ಇಷ್ಟೇ. ಮೇ 01 ಕಾರ್ಮಿಕ ದಿನಾಚರಣೆ ಹೀಗಾಗಿ ಈ ದಿನ ಸರ್ಕಾರಿ ರಜೆ ಇರುತ್ತದೆ. ಇನ್ನೂ ಮೇ 02 ಶನಿವಾರ ಮತ್ತು ಮೇ 03 ಭಾನುವಾರ. ಈ ಮೂರೂ ದಿನ ಸತತ ಸರ್ಕಾರಿ ರಜೆ ಇದೆ. ಹೀಗಾಗಿ ಏಪ್ರಿಲ್ 30 ರಂದು ಲಾಕ್‌ಡೌನ್ ಮುಗಿಯುತ್ತಿದ್ದಂತೆ, ಸತತ ಮೂರು ದಿನ ಸರ್ಕಾರಿ ರಜೆ ಇರುವ ಕಾರಣ ಜನ ಸಾಮಾಜಿಕ ಅಂತರ ಮರೆದು ಒಂದೆಡೆ ಸೇರಬಹುದು. ಇಂತಹ ಘಟನೆಗಳು ಮತ್ತಷ್ಟು ಆಪತ್ತಿಗೆ ದಾರಿ ಮಾಡಿಕೊಡಬಹುದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ ಅವಧಿಯನ್ನು ಮೇ 03ಕ್ಕೆ ವಿಸ್ತರಿಸಿದ್ದಾರೆ ಎನ್ನಲಾಗುತ್ತಿದೆ.

Comments are closed.