ರಾಷ್ಟ್ರೀಯ

ಭಾರತದಲ್ಲಿ ಲಾಕ್‌ಡೌನ್ ಅನ್ನು ಹೆಚ್ಚು ಕಠಿಣಗೊಳಿಸಬೇಕು ಮತ್ತು ಸೋಂಕಿತ ಪ್ರದೇಶಗಳತ್ತ ಗಮನ ಹರಿಸಬೇಕು: WHO

Pinterest LinkedIn Tumblr


ನವದೆಹಲಿ: ಕರೋನಾದಿಂದ ವಿಶ್ವದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೊರೊನಾವೈರಸ್ (Coronavirus) ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಗೆ ತಂದು 20 ದಿನಗಳಾದರೂ ಕೂಡ ಅದು ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ಏತನ್ಮಧ್ಯೆ ನಾಳೆ (ಏಪ್ರಿಲ್ 14) ಮಧ್ಯರಾತ್ರಿ 12 ಗಂಟೆಗೆ ಈ ಲಾಕ್‌ಡೌನ್ ಪೂರ್ಣಗೊಳ್ಳುತ್ತಿದ್ದು ಸರ್ಕಾರ ಇನ್ನೂ ಎರಡು ವಾರಗಳವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ ದೇಶದಲ್ಲಿ ಹಲವು ರಾಜ್ಯಗಳು ಏಪ್ರಿಲ್ 30ರವರೆಗೆ ಅನೇಕ ಲಾಕ್‌ಡೌನ್ ಜಾರಿಗೆ ತಂದಿವೆ, ಆದರೆ ಇದನ್ನು ಕೇಂದ್ರ ಸರ್ಕಾರವು ಅಧಿಕೃತವಾಗಿ ದೇಶಕ್ಕೆ ಘೋಷಿಸಿಲ್ಲ. ಆದರೆ ಲಾಕ್‌ಡೌನ್ 2.0 ನಲ್ಲಿ ಸಾಮಾನ್ಯ ಜನರಿಗೆ ಕೆಲವು ವಿಷಯಗಳಲ್ಲಿ ಪರಿಹಾರ ದೊರೆಯುವ ನಿರೀಕ್ಷೆಯಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಡೇವಿಡ್ ನಬರೋ ಕೂಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಜನರ ಜೀವನೋಪಾಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ:
ವಿಶ್ವ ಆರೋಗ್ಯ ಸಂಸ್ಥೆಯ ಡೇವಿಡ್ ನಬರೋ ಲಾಕ್‌ಡೌನ್ ವಿಸ್ತರಣೆ ಮಾಡುವ ವೇಳೆ ರೋಗದ ಹರಡುವಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮಾತ್ರವಲ್ಲ ಜನರ ಜೀವನೋಪಾಯವನ್ನು ಖಾತ್ರಿಪಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ.

3L ಸೂತ್ರವನ್ನು ಸೂಚಿಸಿದ WHO :
ಲಾಕ್‌ಡೌನ್ 2.0 ಗಾಗಿ ವಿಶ್ವ ಆರೋಗ್ಯ ಸಂಸ್ಥೆ 3L ಸೂತ್ರವನ್ನು ರೂಪಿಸಿದೆ. ಅದು ಜೀವ, ಜೀವನೋಪಾಯ ಮತ್ತು ಜೀವನ. ನಬರೋ ಪ್ರಕಾರ, ಎರಡನೇ ಲಾಕ್‌ಡೌನ್‌ನಲ್ಲಿ ರ್ಕಾರವು ಜೀವ, ಜೀವನೋಪಾಯ ಮತ್ತು ಜೀವನ ವಿಧಾನಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ನಾವು ಜೀವನ ಮತ್ತು ಪ್ರಪಂಚ ಎರಡನ್ನೂ ನೋಡಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 14ರಂದು ಲಾಕ್‌ಡೌನ್ ಮುಗಿದ ನಂತರ ಅನೇಕ ಕಾರ್ಯಗಳು ಪ್ರಾರಂಭವಾಗಲಿದ್ದು ಇದು ದೇಶದ ಆರ್ಥಿಕ ಬೆಳವಣಿಗೆಯ ದರವನ್ನು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಲಾಕ್‌ಡೌನ್ ಮೂಲಕ ಮಾತ್ರವೇ ನಿಯಂತ್ರಣ ಸಾಧ್ಯ:
ಇದರೊಂದಿಗೆ ಡಬ್ಲ್ಯುಎಚ್‌ಒನ ಡೇವಿಡ್ ನಬರೋ ಅವರು ಭಾರತದ ಜನರು ಕೈಗೊಂಡ ಕಠಿಣ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಮುಂಬರುವ ಸಮಯದಲ್ಲೂ ನಾವು ಈ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿರಬೇಕು ಏಕೆಂದರೆ ಕರೋನಾ ವೈರಸ್‌ ಅನ್ನು ಲಾಕ್​​ಡೌನ್ (Lockdown) ಮೂಲಕ ಮಾತ್ರವೇ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.

ಸೋಂಕಿತ ಪ್ರದೇಶಗಳ ಬಗ್ಗೆ ಸರ್ಕಾರದ ಗಮನ:
ಲಾಕ್‌ಡೌನ್ 2.0 ನಲ್ಲಿ ಹೆಚ್ಚಿನ ಅಪಾಯವಿರುವಂತಹ ಸ್ಥಳಗಳನ್ನು ಗುರುತಿಸಲಾಗುತ್ತದೆ. ಈ ಲಾಕ್‌ಡೌನ್ ಅನ್ನು ಹೆಚ್ಚು ಕಠಿಣಗೊಳಿಸಬೇಕಾಗಿದೆ ಮತ್ತು ಸೋಂಕಿತ ಪ್ರದೇಶಗಳತ್ತ ಗಮನ ಹರಿಸಬೇಕು ಎಂದು ನಬರೋ ಹೇಳಿದರು.

Comments are closed.