ರಾಷ್ಟ್ರೀಯ

21 ದಿನಗಳ ಕೋವಿಡ್-19 ಲಾಕ್ ಡೌನ್ ಮುಗಿದ ನಂತರ ನಾಳೆ ಕರ್ತವ್ಯಕ್ಕೆ ಹಾಜರಾದ ಕೇಂದ್ರ ಸಚಿವರು, ಅಧಿಕಾರಿಗಳು

Pinterest LinkedIn Tumblr

ನವದೆಹಲಿ: 21 ದಿನಗಳ ಕೋವಿಡ್-19 ಲಾಕ್ ಡೌನ್ ಮುಗಿದ ನಂತರ ಕೇಂದ್ರ ಸಚಿವರು, ಸರ್ಕಾರದ ಇಲಾಖೆಗಳ ಜಂಟಿ ಕಾರ್ಯದರ್ಶಿಗಳು ಮತ್ತು ಉನ್ನತ ರ್ಯಾಂಕ್ ಮಟ್ಟದ ಅಧಿಕಾರಿಗಳು ಸೋಮವಾರದಿಂದ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಅಗತ್ಯ ಸೇವೆಗಳ ಇಲಾಖೆಗಳ ಸರ್ಕಾರಿ ನೌಕರರು, ಕೇಂದ್ರ ಸಚಿವರುಗಳು ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಪ್ರಧಾನ ಮಂತ್ರಿಗಳು ಕಳೆದ ವಾರ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೇಂದ್ರದ ಸಚಿವರುಗಳು, ಅಧಿಕಾರಿಗಳು ಇಂದು ಕಚೇರಿಗೆ ಬಂದಿದ್ದು ಕಂಡುಬಂತು.

ಕೇಂದ್ರ ಸರ್ಕಾರದ ಪ್ರತಿ ಸಚಿವಾಲಯದ ಅಗತ್ಯ ಸೇವೆಗಳ ಇಲಾಖೆಗಳ ಮೂರನೇ ಒಂದು ಭಾಗದಷ್ಟು ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಂಡು ಲಾಕ್ ಡೌನ್ ನ ನಿಯಮಗಳ ಮಿತಿಯ ನಡುವೆ ಇಂದು ಕರ್ತವ್ಯಕ್ಕೆ ಹಾಜರಾಗಿ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಮ್ಮ ಕನಿಷ್ಠ ಅಗತ್ಯ ಸಿಬ್ಬಂದಿಯೊಂದಿಗೆ ಸಂಸತ್ತಿನ ಉತ್ತರ ಬ್ಲಾಕ್ ನಲ್ಲಿರುವ ಕಚೇರಿಗೆ ಆಗಮಿಸಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ಸಬಲೀಕರಣ ಸಚಿವ ತಾವರ್ ಚಂದ್ ಗೆಹ್ಲೊಟ್, ಕ್ರೀಡಾ ಸಚಿವ ಕಿರಣ್ ರಿಜಿಜು, ಬುಡಕಟ್ಟು ಇಲಾಖೆ ಸಚಿವ ಅರ್ಜುನ್ ಮುಂಡಾ ಸಹ ಇಂದು ತಮ್ಮ ತಮ್ಮ ಕಚೇರಿಗಳಿಗೆ 19 ದಿನಗಳ ವಿರಾಮದ ಬಳಿಕ ಆಗಮಿಸಿದರು. ಈ ಸಚಿವರುಗಳೆಲ್ಲ ಲಾಕ್ ಡೌನ್ ಘೋಷಣೆಯಾದ ನಂತರ ತಮ್ಮ ಕಚೇರಿಗಳಿಂದಲೇ ಕೆಲಸ ಮಾಡುತ್ತಿದ್ದರು.

ಪ್ರಧಾನಿಯವರ ನಿರ್ದೇಶನ ಮೇರೆಗೆ ಎಲ್ಲಾ ಸಚಿವರು ಕೆಲಸ ಆರಂಭಿಸಿದ್ದಾರೆ ಎಂದು ಗೆಹ್ಲೊಟ್ ತಿಳಿಸಿದರು. ಸಂಸತ್ತಿನ ನಾರ್ತ್ ಬ್ಲಾಕ್, ಸೌತ್ ಬ್ಲಾಕ್, ಶಾಸ್ತ್ರಿ ಭವನ್ ಗಳಲ್ಲಿರುವ ತಮ್ಮ ಕಚೇರಿಗಳಿಗೆ ಹೋಗುವ ಮೊದಲು ಸಚಿವರುಗಳು ಮತ್ತು ಸಿಬ್ಬಂದಿ ಥರ್ಮಲ್ ಸ್ಕಾನಿಂಗ್ ಗೊಳಪಟ್ಟಿದ್ದು ಕಂಡುಬಂತು.

Comments are closed.