ರಾಷ್ಟ್ರೀಯ

ಕೋವಿಡ್ 19 ಮಹಾಮಾರಿಗೆ ಗಾಯಕ ನಿರ್ಮಲ್ ಸಿಂಗ್ ಸಾವು

Pinterest LinkedIn Tumblr


ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಡುಗಾರ ನಿರ್ಮಲ್ ಸಿಂಗ್ (62ವರ್ಷ) ಅವರು ಕೋವಿಡ್ 19 ಮಹಾಮಾರಿಗೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ನಿರ್ಮಲ್ ಸಿಂಗ್ ಅವರು ಸಿಖ್ಖ್ ರ ಪವಿತ್ರ ಧಾರ್ಮಿಕ ಮಂದಿರ ಗೋಲ್ಡನ್ ಟೆಂಪಲ್ ನಲ್ಲಿ ಮಾಜಿ ಗಾಯಕರಾಗಿದ್ದರು. ಅಲ್ಲದೇ ಸೆಲೆಬ್ರಿಟಿ ಹಾಡುಗಾರರಾಗಿದ್ದರು. ಕೋವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಅಮೃತಸರದಲ್ಲಿ ಬೆಳಗ್ಗಿನ ಜಾವ 4.30ರ ಸುಮಾರಿಗೆ ವಿಧಿವಶರಾಗಿದ್ದಾರೆ ಎಂದು ವರದಿ ವಿವರಿಸಿದೆ.

ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಸಿಂಗ್ ಅವರನ್ನು ವೆಂಟಿಲೇಶನ್ ನಲ್ಲಿ ಇಡಲಾಗಿತ್ತು. ಆದರೆ ತೀವ್ರ ಅಸ್ತಮಾದಿಂದ ಸಮಸ್ಯೆ ಉಲ್ಬಣಗೊಂಡಿತ್ತು ಎಂದು ಪಂಜಾಬ್ ವಿಪತ್ತು ನಿರ್ವಹಣಾ ವಿಶೇಷ ಮುಖ್ಯ ಕಾರ್ಯದರ್ಶಿ ಕೆಬಿಎಸ್ ಸಿಧು ತಿಳಿಸಿದ್ದಾರೆ.

ನಿರ್ಮಲ್ ಸಿಂಗ್ ಅವರು ಇತ್ತೀಚೆಗಷ್ಟೇ ವಿದೇಶದಿಂದ ಪಂಜಾಬ್ ಗೆ ವಾಪಸ್ ಆಗಿದ್ದರು. ಮಾರ್ಚ್ 30ರಂದು ಉಸಿರಾಟದ ತೊಂದರೆ ಮತ್ತು ತಲೆಸುತ್ತುವಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿ ತಿಳಿಸಿದೆ.

Comments are closed.